Basavaraj Bommai: ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಯ ಫಲಿತಾಂಶವನ್ನು ಕನ್ನಡ ನಾಡಿನ ಜನತೆ ನೀಡಿದ್ದಾರೆ. ಚುನಾವಣೆಯಲ್ಲಿ (Karnataka Election) ಬಿಜೆಪಿಗೆ ಹೀನಾಯವಾಗಿ ಸೋಲಾಗುತ್ತಿದ್ದಂತೆ ಬೊಮ್ಮಾಯಿ (CM Basavaraj Bommai) ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಹೌದು, 2023ರ ಚುನಾವಣೆ ರೋಚಕವಾದ ಫಲಿತಾಂಶವನ್ನು ನೀಡಿದೆ. ಆಡಳಿತ ರೂಢ ಬಿಜೆಪಿಯ ಘಟಾನುಘಟಿ ನಾಯಕರು ಸೋಲುವನ್ನು ಅನುಭವಿಸುತ್ತಿದ್ದಾರೆ. ಬಿಜೆಪಿಗಂತೂ ಭಾರಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಾವೇರಿಯ (Haveri) ಶಿಗ್ಗಾಂವಿಯಲ್ಲಿರುವ ಬೊಮ್ಮಾಯಿ ಇಂದು ಸಂಜೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಅಂದಹಾಗೆ ಮಧ್ಯಾಹ್ನ 12:30ರ ಟ್ರೆಂಡ್ ಪ್ರಕಾರ ಬಿಜೆಪಿ 65, ಕಾಂಗ್ರೆಸ್ 132, ಜೆಡಿಎಸ್ 21, ಇತರರು 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
