Home » ಕೆಲದಿನಗಳಲ್ಲೇ ತೆಲಂಗಾಣದ ರಾಜ್ಯಪಾಲ ಗದ್ದುಗೆ ಏರಲಿದ್ದಾರೆ ಮಾಜಿ ಸಿಎಂ ಬಿಎಸ್ ವೈ!!? | ಮತ್ತೆ ಅಧಿಕಾರದಲ್ಲಿ ನೋಡಬೇಕೆಂದು ಬಯಸಿರುವ ಅಭಿಮಾನಿಗಳಲ್ಲಿ ಸಂತಸ

ಕೆಲದಿನಗಳಲ್ಲೇ ತೆಲಂಗಾಣದ ರಾಜ್ಯಪಾಲ ಗದ್ದುಗೆ ಏರಲಿದ್ದಾರೆ ಮಾಜಿ ಸಿಎಂ ಬಿಎಸ್ ವೈ!!? | ಮತ್ತೆ ಅಧಿಕಾರದಲ್ಲಿ ನೋಡಬೇಕೆಂದು ಬಯಸಿರುವ ಅಭಿಮಾನಿಗಳಲ್ಲಿ ಸಂತಸ

0 comments

ಇತ್ತೀಚಿಗೆ ಕರ್ನಾಟಕದ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ, ಮಾಲ್ಡೀವ್ಸ್ ನಲ್ಲಿ ಹಾಯಾಗಿ ರಜೆಯಲ್ಲಿ ವಿರಮಿಸುತ್ತಿರುವ ಬಿ.ಎಸ್ ಯಡಿಯೂರಪ್ಪನವರು ತೆಲಂಗಾಣದ ಮುಂದಿನ ರಾಜ್ಯಪಾಲರಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ತೆಲಂಗಾಣದ ಹಾಲಿ ರಾಜ್ಯಪಾಲೆಯಾಗಿದ್ದ ತಮಿಳ್ಳೆ ಸೌಂದರ್ಯರಾಜನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದ್ದು,ಈ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗುವ ಸ್ಥಾನಕ್ಕೆ ಬಿಎಸ್‌ವೈ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಹೈಕಮಾಂಡ್ ಮೂಲಗಳ ಪ್ರಕಾರ, ಯಡಿಯೂರಪ್ಪ ಮಾಲ್ಡೀವ್ ರಜೆಯಿಂದ ಹಿಂದಿರುಗಿದ ತಕ್ಷಣ ಕೇಂದ್ರ ಸರ್ಕಾರವು ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರವು ಈ ಹಿಂದೆಯೇ ನೆರೆಯ ರಾಜ್ಯದಲ್ಲಿ ಅವರನ್ನು ರಾಜ್ಯಪಾಲರನ್ನಾಗಿ ಮಾಡಲು ಯೋಜಿಸಿತ್ತು. ಆದರೆ ಯಡಿಯೂರಪ್ಪ ಅವರು ಯಾವುದೇ ರೀತಿಯ ಹುದ್ದೆ ಬೇಡ ಎಂದು ಅದನ್ನು ತಿರಸ್ಕರಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರವು ರಾಜ್ಯಪಾಲರಾಗಿ ಯಡಿಯೂರಪ್ಪರ ಸೇವೆಯನ್ನು ಬಯಸಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

You may also like

Leave a Comment