BS Yediyurappa: ಬೆಂಗಳೂರು: ‘ರಾಜ್ಯದ ಜನರ ತೀರ್ಮಾನವನ್ನು ಗೌರವಿಸುತ್ತೇವೆ, ಧನ್ಯವಾದಗಳು ‘ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ತಿಳಿಸಿದ್ದಾರೆ.
ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇಮಾಧ್ಯಮಗಳೊಂದಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿದ, ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ.13 ರಂದು ಮತ ಎಣಿಕೆ ಕಾರ್ಯ ನಡೆದಿದೆ. ಇಂದು ಕಾಂಗ್ರೆಸ್ ಭಾರೀ ಮುನ್ನಡೆಯಲ್ಲಿ ಗೆಲುವು ಸಾಧಿಸಿದೆ. ರಾಜ್ಯದ ಜನರ ತೀರ್ಮಾನವನ್ನು ಗೌರವಿಸುತ್ತೇವೆ ಧನ್ಯವಾದ ಅರ್ಪಿಸುತ್ತೇನೆ ಎಂದರು
ಬಿಜೆಪಿಗೆ ಸೋಲು ಗೆಲುವು ಹೊಸತಲ್ಲ ಎರಡು ಸ್ಥಾನದಿಂದ ಆರಂಭಿಸಿ ಸ್ವಂತ ಬಲದಿಂದ ಸರ್ಕಾರ ಮಾಡಿದ್ದೆವು. ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಅಭಿವೃದ್ಧಿ ಪರ ಆಡಳಿತ ಕೊಟ್ಟಿದ್ವಿ. ಆದರೂ ಸೋಲಾಗಿದೆ, ಸೋಲಿನ ಬಗ್ಗೆ ಆತ್ಮಾವ ಲೋಕನ ಮಾಡಿ ಕೊಳ್ಳುತ್ತೇವೆ.
ಕಾಂಗ್ರೆಸ್‍ನವರು ಮನೆಮನಗೆ ಹೋಗಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ. ನಿಮ್ಮ ಭರವಸೆ ಈಡೇರಿಸಿ, ನಿಮ್ಮ ಕರ್ತವ್ಯ ಎಂದರು. ನಾವು ಹಿಂದೆ 25 ಲೋಕಸಭೆ ಸೀಟ್ ಗೆದ್ದಿದ್ವಿ. ಈ ಸಲವೂ ಅಷ್ಟೇ ಸೀಟ್ ಗೆದ್ದು ಮೋದಿಯವರು ಮತ್ತೆ ಪ್ರಧಾನಿ ಮಾಡಲು ಸಹಕರಿಸುತ್ತೇವೆ ಎಂದು ಹೇಳಿದರು.
