Home » ದೇವಾಲಯಗಳ ನಾಶ ಮಾಡಿಯೇ ಮಸೀದಿ ನಿರ್ಮಿಸಿದ್ದು ! ಈಗ ಸಾಕ್ಷಿ ಸಿಕ್ಕಿದೆ- ಸಿ.ಟಿ.ರವಿ

ದೇವಾಲಯಗಳ ನಾಶ ಮಾಡಿಯೇ ಮಸೀದಿ ನಿರ್ಮಿಸಿದ್ದು ! ಈಗ ಸಾಕ್ಷಿ ಸಿಕ್ಕಿದೆ- ಸಿ.ಟಿ.ರವಿ

by Praveen Chennavara
0 comments

ಚಿಕ್ಕಮಗಳೂರು : ”32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿದ್ದಾರೆ ಎಂದು ಹೇಳುತ್ತಿದ್ದೆವು. ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೇ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ. ಶಿವ, ವಿಷ್ಣು, ರಾಮ ಮಂದಿರ ನಾಶ ಮಾಡಿದೆವು ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಅವರು, ”ಸಾಕ್ಷಿ ಕೇಳುವ ಜಾತ್ಯತೀತ ಸೋಗಲಾಡಿ ಮೂರ್ಖರಿಗೆ ಮಂಗಳೂರಲ್ಲಿ ಸಾಕ್ಷಿ ಸಿಕ್ಕಿದೆ. ಈಗಲೂ ಇಸ್ಲಾಂ ಶಾಂತಿಗಾಗಿ ಎಂದು ಯಾರಾದರೂ ಹೇಳಿದರೆ ಅವರಿಂದ ರಾಷ್ಟ್ರ ಉಳಿಯಲು ಸಾಧ್ಯವಿಲ್ಲ. ನಾಶ ಮಾಡಿಯೇ ಅದು ಬೆಳೆದಿರುವುದು, ಮತ್ತೆ ಹೇಳುತ್ತೇನೆ ನಾಶ ಮಾಡಿಯೇ ಅದು ಬೆಳೆದಿರುವುದು. 28 ದೇಶದ ನಾಗರಿಕತೆ ನಾಶ ಮಾಡಿ ಅದು ಬೆಳೆದಿದೆ.ಭಾರತದ ಬಹು ಭಾಗವನ್ನ ನಾವು ಕಳೆದುಕೊಂಡಿದ್ದೇವೆ. ಸಿಂಧು ನದಿ‌ ನಾಗರಿಕತೆಯನ್ನ ಯಾರು ನಾಶ ಮಾಡಿದ್ದು, ಇಸ್ಲಾಂ ನಾಶ ಮಾಡಿದ್ದು.
ಅದನ್ನ ಹೇಳಲು ಕೆಲವರಿಗೆ ಗೊತ್ತು,ಹೇಳುವುದಿಲ್ಲ” ಎಂದರು.

”ನಮಗೆ ಗೊತ್ತು, ಹಾಗಾಗಿ ಆ ಸತ್ಯವನ್ನ ಹೇಳುತ್ತೇವೆ, ಯಾಕೆಂದರೆ, ಗಲಭೆ ಹುಟ್ಟು ಹಾಕಲು ಅಲ್ಲ, ದೇಶ ಉಳಿಯಲು. ಸತ್ಯ ಒಪ್ಪಿಕೊಳ್ಳಲಿ. ಇಲ್ಲ ಈಗಲೇ ಮತಾಂತರ ಆಗುವವರಿದ್ದರೆ ಆಗಲಿ, ನಾವು ನೇರವಾಗಿ ಎದುರಿಸುತ್ತೇವೆ. ಹಿಂದೂ ಹೆಸರಲ್ಲಿ ಹಿಂದೂ ಧರ್ಮಕ್ಕೆ ದ್ರೋಹ ಮಾಡುವುದು ಬೇಡ” ಎಂದರು.

You may also like

Leave a Comment