Home » Canara Bank Starts New Schemes: ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ತಂದಿದೆ ಹೊಸ ಯೋಜನೆ

Canara Bank Starts New Schemes: ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ತಂದಿದೆ ಹೊಸ ಯೋಜನೆ

287 comments
Canara Bank Starts New Schemes

Canara Bank Starts New Schemes: ಕೆನರಾ ಬ್ಯಾಂಕ್‌ ಇದೀಗ ಹಲವು ಯೋಜನೆಗಳನ್ನು ಪ್ರಕಟ ಮಾಡಿದ್ದು ಇದರಲ್ಲಿ ಯಾವೆಲ್ಲ ಸೇವೆಗಳು ಇದೆ ಎನ್ನುವುದರ ಕುರಿತು ತಿಳಿಯೋಣ.

ಇಲ್ಲಿ ಮುಖ್ಯಾವಗಿ ಮಹಿಳಾ ಸೇವಿಂಗ್ಸ್‌ ಅಕೌಂಟ್‌, ಎಫ್‌ಡಿಗಳ ಮೇಲೆ ಆನ್‌ಲೈನ್‌ ಮೂಲಕ ಸಾಲ, ಪ್ರೀ ಅಪ್ರೂವ್ಡ್‌ ಲೋನ್‌ ಜೊತೆಗೆ ಕೆನರಾ ಬ್ಯಾಂಕ್‌ ಹೊಸ ಯುಪಿಐ ಪಾವತಿ ಆಪ್‌ನ್ನೂ ಹೊರ ತಂದಿದೆ.

ಇದನ್ನೂ ಓದಿ: Vijayapura: ಕೊಳವೆ ಬಾವಿಗೆ ಬಿದ್ದ ಮಗು ಪ್ರಕರಣ; ಅಪರೇಷನ್‌ ಸಕ್ಸಸ್‌; ಸಾವು ಗೆದ್ದು ಬಂದ ಪುಟ್ಟ ಕಂದ

ಕೆನರಾ ಹೀಲ್‌ ಸಾಲ ಯೋಜನೆ; ಒಂದು ವೇಳೆ ಆಸ್ಪತ್ರೆಗಳಲ್ಲಿನ ವೆಚ್ಚ ಮಿತಿ ಮೀರಿದರೆ ಕೆನರಾ ಬ್ಯಾಂಕ್‌ನಿಂದ ಸಾಲ ಸೌಲಭ್ಯವಿರಲಿದೆ. ಆರೋಗ್ಯ ವಿಮೆ ಮಾಡಿಸಿದ್ದು, ಅದರಲ್ಲಿ ಕ್ಲೈಮ್‌ ಮಾಡಿದ ಹಣಕ್ಕಿಂತಲೂ ಹೆಚ್ಚು ಆಸ್ಪತ್ರೆ ಬಿಲ್‌ ಬಂದರೆ ಆಗ ಕೆನರಾ ಬ್ಯಾಂಕ್‌ ಹೀಲ್‌ ಸ್ಕೀಂ ಮೂಲಕ ನೀವು ಸಾಲ ಪಡೆಯಬಹುದು. ಈ ಸಾಲಕ್ಕೆ 11.55 ಮತ್ತು ಶೇ.12.30 ವಾರ್ಷಿ ಬಡ್ಡಿ ಇರಲಿದೆ. ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಆಯ್ಕೆ ಮಾಡಿಕೊಂಡರೆ ಶೇ. 11.55 ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಫಿಕ್ಸೆಡ್ ಇಂಟರೆಸ್ಟ್ ರೇಟ್ ಆಯ್ಕೆ ಮಾಡಿಕೊಂಡರೆ ಬಡ್ಡಿ ಶೇ. 12.30ರಷ್ಟು ಇರುತ್ತದೆ.‌

ಇದನ್ನೂ ಓದಿ: Jaipur: ತರಕಾರಿ ವ್ಯಾಪಾರಿಯನ್ನು ಅಮಾನುಷವಾಗಿ ಹೊಡೆದು ಕೊಂದ ಪೋಲೀಸ್ ಮಗ !! ಭಯಾನಕ ವಿಡಿಯೋ ವೈರಲ್

ಕೆನರಾ ಏಂಜೆಲ್‌ ಅಕೌಂಟ್‌:

ಇದು ಮಹಿಳೆಯರಿಗೆ ಸಿಗುವ ಸವಲತ್ತು. ಇದರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಮಹಿಳೆಯರು ಏಜೆಂಲ್‌ ಸೇವಿಂಗ್ಸ್‌ ಅಕೌಂಟ್‌ ತೆರೆಯಬಹುದು. ಪರ್ಸನಲ್‌ ಲೋನ್‌ ದೊರಕುತ್ತದೆ. ಇದನ್ನು ಕ್ಯಾನ್ಸರ್‌ ರೋಗದ ಚಿಕಿತ್ಸೆ ವೆಚ್ಚ ಭರಿಸಲು ಈ ಸಾಲ ಉಪಯೋಗಕ್ಕೆ ಬರುತ್ತದೆ. ಟರ್ಮ್‌ ಡೆಪಾಸಿಟ್‌ ಅಥವಾ ನಿಶ್ಚಿತ ಠೇವಣಿಗಳ ಮೇಲೆ ಆನ್ಲೈನ್‌ ಸಾಲ ಕೆನರಾ ಏಜೆಂಲ್‌ ಉಳಿತಾಯ ಖಾತೆದಾರರಿಗೆ ಲಭ್ಯವಿದೆ.

You may also like

Leave a Comment