Home » PM e- bus: ಉಚಿತ ಬಸ್ಸಲ್ಲಿ ಓಡಾಡೋ ಮಹಿಳೆಯರು, ಪುರುಷರೆಲ್ಲರಿಗೂ ಮಹತ್ವದ ಸುದ್ದಿ- ಕೇಂದ್ರ ಸರ್ಕಾರದಿಂದ ಬಂತು ಭರ್ಜರಿ ಗುಡ್ ನ್ಯೂಸ್

PM e- bus: ಉಚಿತ ಬಸ್ಸಲ್ಲಿ ಓಡಾಡೋ ಮಹಿಳೆಯರು, ಪುರುಷರೆಲ್ಲರಿಗೂ ಮಹತ್ವದ ಸುದ್ದಿ- ಕೇಂದ್ರ ಸರ್ಕಾರದಿಂದ ಬಂತು ಭರ್ಜರಿ ಗುಡ್ ನ್ಯೂಸ್

1 comment
PM e- bus

PM e- bus : ಈ ವರ್ಷದ ಆಗಸ್ಟ್‌ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡ ಯೋಜನೆಯು ಸಂಘಟಿತ ಸಾರ್ವಜನಿಕ ಬಸ್ ಸೇವೆಯ ಕೊರತೆಯಿರುವ ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸುವ ಯೋಜನೆ ಹಾಕಿಕೊಂಡಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ಉದ್ಘಾಟಿಸಿದ 16 ನೇ ಅರ್ಬನ್ ಮೊಬಿಲಿಟಿ ಇಂಡಿಯಾ (ಯುಎಂಐ) ಕಾನ್ಫರೆನ್ಸ್ ಕಮ್ ಎಕ್ಸ್‌ ಪೋ 2023 ಕಾರ್ಯಕ್ರಮದಲ್ಲಿ ‘PM e- bus ಸೇವಾ ಯೋಜನೆ’ ಅಡಿಯಲ್ಲಿ 3,000 ಎಲೆಕ್ಟ್ರಿಕ್ ಬಸ್‌ಗಳ ಮೊದಲ ಸೆಟ್ ಟೆಂಡರ್‌ ಮುಂದಿನ ವಾರ ಹೊರಬೀಳುವ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರಸ್ತಾವನೆಗಳನ್ನು ರವಾನಿಸಲು ರಾಜ್ಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಶುಕ್ರವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಸ್ ಗಳ ಮೂಲಸೌಕರ್ಯ, ಮಲ್ಟಿಮೋಡಲ್ ಇಂಟರ್ಚೇಂಜ್ ಸೌಲಭ್ಯಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ಸ್(GUMI) ಅಡಿಯಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಹಕರಿಸುತ್ತದೆ.PM-ebus ಸೇವಾ ಅಡಿಯಲ್ಲಿ 169 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ(PPP) ಮಾದರಿಯಲ್ಲಿ 10,000 ಇ-ಬಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ. ಇದರ ಜೊತೆಗೆ ಸಂಬಂಧಿತ ಮೂಲಸೌಕರ್ಯ, ಬಸ್ ಡಿಪೋಗಳು ಮತ್ತು ಮೀಟರ್‌ನ ಹಿಂದಿನ ವಿದ್ಯುತ್ ಮೂಲಸೌಕರ್ಯಗಳಿಗೆ ಬೆಂಬಲ ನೀಡಲಾಗುತ್ತದೆ.

ಇದನ್ನು ಓದಿ: Obscene Post: ಅಶ್ಲೀಲ ಪೋಸ್ಟ್‌, ಪೋಲಿ ಚಿತ್ರಗಳ ಕುರಿತು ಹೈಕೋರ್ಟ್‌ನಿಂದ ಮಹತ್ವದ ತೀರ್ಪು!!

You may also like

Leave a Comment