Home » AR Krishnamurthi: ಒಂದು ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ಮತದ ಮುನ್ನಡೆಯಲ್ಲಿ ಗೆಲುವು

AR Krishnamurthi: ಒಂದು ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ಮತದ ಮುನ್ನಡೆಯಲ್ಲಿ ಗೆಲುವು

0 comments
AR Krishnamurthi

AR Krishnamurthi : 2004 ರ ಚುನಾವಣೆಯಲ್ಲಿ ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ ಆರ್‌ ಕೃಷ್ಣಮೂರ್ತಿಗೆ (AR Krishnamurthi) ಕೊಳ್ಳೇಗಾಲದ ಮತದಾರರು ಭರ್ಜರಿ ಗೆಲುವನ್ನೇ ನೀಡಿದ್ದಾರೆ. ಹೌದು, ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಎಆರ್​ಕೆಗೆ ಈ ಗೆಲುವು ಹೊಸತನವನ್ನು ಕೊಟ್ಟಿದ್ದು, 1 ಮತದ ಸೋಲನ್ನು ಈ ಭರ್ಜರಿ ಗೆಲುವು ಮರೆಸಿದೆ.

ಹಾಲಿ ಬಿಜೆಪಿ ಶಾಸಕ ಎನ್ ಮಹೇಶ್ ವಿರುದ್ಧ ಎ ಆರ್ ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೆ ಮೇಲೆದ್ದಿದ್ದಾರೆ.

ಮುಖ್ಯವಾಗಿ ಬಿಎಸ್‌ಪಿ ಬೆಂಬಲ, ಅನುಕಂಪ, ಜೊತೆಗೆ ಮಹೇಶ್ ಅವರಿಗಿದ್ದ ವ್ಯಾಪಕ ವಿರೋಧ ಎ.ಆರ್.ಕೃಷ್ಣಮೂರ್ತಿ ಯವರ ಗೆಲುವಿಗೆ ಅನುಕೂಲವಾಗಿದೆ ಎನ್ನಲಾಗುತ್ತಿದೆ.

ಗೆಲುವಿನ ಬಗ್ಗೆ ಕೃಷ್ಣಮೂರ್ತಿಯವರು, ಒಂದು ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು. ಈಗ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದಾರೆ. ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಇದು ಖುಷಿಯ ವಿಚಾರ ಎಂದಿದ್ದಾರೆ.

2004 ರ ಚುನಾವಣೆಯಲ್ಲಿ ಕೃಷ್ಣಮೂರ್ತಿಯವರು ಒಂದು ಮತದಿಂದ ಸೋತಿದ್ದರು. ಇದೀಗ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೃಷ್ಣಮೂರ್ತಿಯವರು 1,08,363 ಮತಗಳನ್ನು ಗಳಿಸಿದ್ದು, ಎನ್ ಮಹೇಶ್ 48,844 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ.

ಇದನ್ನೂ ಓದಿ: Karnataka election: ಎಲ್ಲಾ 224 ಕ್ಷೇತ್ರಗಳ ಗೆಲುವು ಸೋಲುಗಳ ಕಂಪ್ಲೀಟ್ ಅಂಕಿ ಅಂಶ, ಚುನಾವಣಾ ಆಯೋಗದಿಂದ ಫಲಿತಾಂಶ !

You may also like

Leave a Comment