Home » Siddaramaiah: 1 ಕೋಟಿಗೆ ಹೊಸ ‘Toyota ವೆಲ್‌ಫೈರ್’ ಕಾರು ಖರೀದಿಸಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ! ಏನಿದರ ವಿಶೇಷತೆ ಗೊತ್ತಾ?

Siddaramaiah: 1 ಕೋಟಿಗೆ ಹೊಸ ‘Toyota ವೆಲ್‌ಫೈರ್’ ಕಾರು ಖರೀದಿಸಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ! ಏನಿದರ ವಿಶೇಷತೆ ಗೊತ್ತಾ?

by ಹೊಸಕನ್ನಡ
0 comments
Siddaramaiah

Siddaramaiah: ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ(Karmataka CM) ಪಟ್ಟ ಒಲಿಯುತ್ತಿದ್ದಂತೆಯೇ ಸಿದ್ದರಾಮಯ್ಯ(Siddaramaiah) ಅವರಿಗಾಗಿ ಸರ್ಕಾರದಿಂದ ಹೊಸ ಕಾರು ಖರೀದಿ ಮಾಡಲಾಗಿದೆ. ಟೊಯೋಟಾ ವೆಲ್ಫೈರ್​(Toyota ವೆಲ್‌ಫೈರ್) ಕಾರು ಇದಾಗಿದ್ದು, ಇದರ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ. ಹಾಗಿದ್ದರೆ ಈ ಕಾರಿನ ವಿಶೇಷ ಏನು? ಯಾವೆಲ್ಲಾ ಫೀಚರ್ಸ್ ಹೊಂದಿದೆ ನೋಡೋಣ ಬನ್ನಿ.

ಮುಖ್ಯಮಂತ್ರಿ(CM) ಅಥವಾ ಸಚಿವರಾಗಿ(Minister) ಅಧಿಕಾರ ವಹಿಸಿಕೊಂಡ ಮೇಲೆಯೇ ಅವರಿಗೆ ಅಧಿಕೃತ ಸರ್ಕಾರಿ ವಾಹನ ದೊರೆಯುತ್ತದೆ. ನಾಳೆ ಸಿದ್ದರಾಮಯ್ಯ ಅವರ ಪ್ರತಿಜ್ಞಾ ವಿಧಿ ಸಮಾರಂಭವಿದ್ದು, ಅದಕ್ಕೂ ಮೊದಲೇ ಈ ಕಾರು, ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಲವಾರು ನೂತನ ಟೊಯೊಟಾ ವೆಲ್‌ಫೈರ್ ಎಂಪಿವಿಯನ್ನು ಅವರೇ ಕೊಂಡುಕೊಂಡಿರಬಹುದು. ಇಲ್ಲವೇ ಉಡುಗೊರೆಯಾಗಿ ಬಂದಿರಬಹುದು ಎನ್ನುತ್ತಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ, ಸರ್ಕಾರವೇ ಖರೀದಿಸಿದೆಯಂತೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ವೆಲ್‌ಫೈರ್ (Toyota vellfire) ಎಂಪಿವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.5 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 180 PS ಗರಿಷ್ಠ ಪವರ್ ಹಾಗೂ 235 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, FWD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಸುರಕ್ಷತೆ ದೃಷ್ಟಿಯಿಂದ ಜಪಾನ್ NCAP ನಡೆಸುವ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. 7 ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.

ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳು, ಉದ್ಯಮಿಗಳು ಟೋಯೋಟಾ ವೆಲ್‌‌ಫೈರ್ ಕಾರು ಹೆಚ್ಚು ಇಷ್ಟಪಡಲು ಕಾರಣವಿದೆ. ನಟ ನಟಿಯರು ಈ ಕಾರನ್ನು ಸಣ್ಣ ಕ್ಯಾರವ್ಯಾನ್ ಆಗಿ ಬಳಕೆ ಮಾಡುತ್ತಾರೆ. ಅತೀ ದೊಡ್ಡ ಸ್ಥಳವಕಾಶ ಹೊಂದಿದೆ. ಹೆಚ್ಚಿನ ಸೆಲೆಬ್ರೆಟಿಗಳು ಕಾರು ಖರೀದಿಸಿ ಇಂಟಿರೀಯರ್ ಮಾಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಕಾರು ಮಾಡಿಫಿಕೇಶನ್ ಮಾಡಿ ಶೂಟಿಂಗ್ ವೇಳೆ ಖಾಸಗಿ ಕ್ಯಾರವ್ಯಾನ್ ಆಗಿ ಬಳಕೆ ಮಾಡುತ್ತಾರೆ. ಈ ಕಾರಿನಲ್ಲಿ ಯಾವುದೇ ಅಡೇ ತಡೆ ಇಲ್ಲದೆ ವಿಶ್ರಾಂತಿ ಪಡೆಯುವಷ್ಟು ಸ್ಥಳವಕಾಶವಿದೆ.

ದೂರು ಪ್ರಯಾಣ ಮಾಡಲು ಟೋಯೋಟಾ ವೆಲ್‌ಫೈರ್ ಅತ್ಯುತ್ತಮ ಕಾರಾಗಿದೆ. ಪ್ರಯಾಣದ ನಡುವೆ ವಿಶ್ರಾಂತಿ ಪಡೆಯಲು ಸಾಧ್ಯವಿದೆ. ಏಷ್ಟು ದೂರ ಪ್ರಯಾಣಿಸಿದರೂ ಯಾವುದೇ ಆಯಾಸವಾಗಲ್ಲ. ಇದರ ಜೊತೆಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲಿದೆ. ಪವರ್ ಸ್ಲೈಡಿಂಗ್ ಡೂರ್, ಎರಡು ಸನ್‌ರೂಫ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, 10.2 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

 

 

ಇದನ್ನು ಓದಿ: Layoff: ಕೆಲಸ ಕಳೆದುಕೊಳ್ಳುತ್ತೀನೋ ಎಂಬ ಭಯನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ 

You may also like

Leave a Comment