Home » CM Siddaramaiah: ‘ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರದ್ದೇ ವೋಟು ಸಾಕು’ ಎಂಬುದು ಸುಳ್ಳು ಸುದ್ದಿ- ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ !!

CM Siddaramaiah: ‘ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರದ್ದೇ ವೋಟು ಸಾಕು’ ಎಂಬುದು ಸುಳ್ಳು ಸುದ್ದಿ- ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ !!

1 comment
CM Siddaramaiah

CM Siddaramaiah: ಹಿಂದೂ ವೋಟು ಬೇಡ, ಮುಸ್ಲಿಮರದ್ದೇ ಸಾಕು ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ನವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಕೆಲ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದು, ನಾನು ಎಂದೂ ಹಾಗೆ ಹೇಳಿಲ್ಲ, ಅದು ಸುಳ್ಳು ಸುದ್ದಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Jaipur: ಮದುವೆಯ ಹಣ ಉಳಿಸಲು ತನ್ನ 17 ಮೊಮಕ್ಕಳಿಗೂ ಒಂದೇ ಬಾರಿ ಮದುವೆ ಮಾಡಿದ ಅಜ್ಜ

ಹೌದು, ಕಾಂಗ್ರೆಸ್(Congress)ನಂಬಿಕೆ ಇಟ್ಟಿರುವುದು ಮುಸ್ಲಿಂ ಓಟುಗಳನ್ನು, ಕಾಂಗ್ರೆಸ್ ಪಕ್ಷವು ಹಿಂದೂಗಳ ಓಟನ್ನು ನಂಬಿಕೊಂಡಿಲ್ಲ. ಪಕ್ಷದ ಚಿನ್ಹೆಯನ್ನು ಹಿಂದಿನ ಕಾಂಗ್ರೆಸ್ ನಾಯಕರು ಬದಲಾಯಿಸಿದ್ದಾರೆ. ಪಕ್ಷ ಕಟ್ಟಿರುವುದು ಮುಸ್ಲಿಂ ಆಧಾರದ ಮೇಲೆ ಹೊರತು ಹಿಂದೂಗಳ ಓಟುಗಳ ಮೇಲೆ ಅಲ್ಲ. ಕಾರ್ಯಕರ್ತರು ಹಿಂದುತ್ವದ ಮೇಲೆ ನಂಬಿಕೆ ಇಡಬಾರದು ಎಂದು ಸಿದ್ದರಾಮಯ್ಯ ಅವರು ಖಾಸಗಿ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Shivaram Hebbar: ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕಿಂಗ್‌ ನ್ಯೂಸ್‌; ಕಾಂಗ್ರೆಸ್‌ ಸೇರಲಿರುವ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಪುತ್ರ

ಈ ಬಗ್ಗೆ ಸ್ಪಷ್ಟೀಕರಣ ನೀಡಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ ಅವರು ‘ಬಿಜೆಪಿ-ಜೆಡಿಎಸ್‌(BJP-JDS) ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆ ಹೋಲುವ ನಕಲಿ ಪತ್ರಿಕಾ ಸುದ್ದಿ ತುಣುಕನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿಯನ್ನು ನ್ಯಾಯದ ಕೈಗೆ ಒಪ್ಪಿಸಲಾಗುವುದು. ಇನ್ನು ಮುಂದೆಯೂ ಯಾರೇ ಸುಳ್ಳು ಸುದ್ದಿ ಸೃಷ್ಟಿಸಿದರೂ, ಹರಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಅಲ್ಲದೆ ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು. ಹೀಗೆ ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

7 ಮಂದಿ ವಿರುದ್ಧ FIR:

ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು, ಪಂಡು ಮೋದಿ ಕ ಪರಿವಾರ, ಬಿಎಸ್‌ವೈ ಸಪೋರ್ಟರ್ಸ್‌, ದಾವಣಗೆರೆ ಬಿಜೆಪಿ, ದಾತ್ರಿ ಗೋಶಾಲೆ ಎಂಬ ಖಾತೆಗಳ ವಿರುದ್ಧ ದೂರು ದಾಖಲಾಗಿದೆ.

You may also like

Leave a Comment