Home » Shakti Transport: ‘ ಶಕ್ತಿ ಟ್ರಾನ್ಸ್ ಪೋರ್ಟ್ ‘ ನ 18,609 ಉಚಿತ ಬಸ್ಸುಗಳಲ್ಲಿ, ಮೊತ್ತ ಮೊದಲ ಬಸ್ ಹೊರಟಿದ್ದು ಧರ್ಮಸ್ಥಳಕ್ಕೆ !

Shakti Transport: ‘ ಶಕ್ತಿ ಟ್ರಾನ್ಸ್ ಪೋರ್ಟ್ ‘ ನ 18,609 ಉಚಿತ ಬಸ್ಸುಗಳಲ್ಲಿ, ಮೊತ್ತ ಮೊದಲ ಬಸ್ ಹೊರಟಿದ್ದು ಧರ್ಮಸ್ಥಳಕ್ಕೆ !

by ಹೊಸಕನ್ನಡ
0 comments

Shakti Transport: ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Guarantee) ದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಇಂದು ಚಾಲನೆ ದೊರಕಿರೋದು ಎಲ್ಲರಿಗೂ ತಿಳಿದಿದೆಯದರೂ, ಮೊದಲ ಎಲ್ಲಿಗೆ ಪ್ರಯಾಣ ಬೆಳೆಸಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಹೌದು, ಸರ್ಕಾರದ ‘ ಶಕ್ತಿ ಬಸ್ ಟ್ರಾನ್ಸ್ ಪೋರ್ಟ್ ‘(Shakti Transport) ನ ಮೊದಲ, ಎರಡನೆಯ ಮತ್ತು ಮೂರನೆಯ ಬಸ್ ಎಲ್ಲಿಂದ ಎಲ್ಲಿಗೆ ಹೊರಟಿತು ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ನಿಮಗೆ ನೀಡಲಿದ್ದೇವೆ.

ಇವತ್ತಿನ ಬಸ್ ಕಂಡಕ್ಟರ್ ಸಿದ್ದರಾಮಯ್ಯನವರು ಟಿಕೆಟ್ ಹರಿದುಕೊಟ್ಟ ಮೊದಲ ಬಸ್ಸು ಧರ್ಮಸ್ಥಳ (First Bus To Dharmasthala manjunatha temple) ಮಂಜುನಾಥನ ಸನ್ನಿಧಿಗೆ ಹೊರಟಿದೆ. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah) ಅವರು ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿಯಲ್ಲಿ ಧರ್ಮಸ್ಥಳಕ್ಕೆ ಹೊರಡುವ ಬಸ್ಸಿಗೆ ಚಾಲನೆ ನೀಡುವ ಮೂಲಕ ‘ಶಕ್ತಿ ಉಚಿತ ಬಸ್ ಯೋಜನೆ’ ಗೆ ರಾಜ್ಯದಲ್ಲಿ ಚಾಲನೆ ನೀಡಿದರು. ಅಲ್ಲಿಂದ ನಂತರ ಎರಡನೇ ಬಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದ್ದು, ಮೂರನೇ ಬಸ್ ಮಲ್ಲಿಕಾರ್ಜುನ ಖರ್ಗೆಯವರ ತವರು ಜಿಲ್ಲೆ ಕಲಬುರುಗಿ ಹಾಗೂ ನಾಲ್ಕನೇ ಬಸ್ ಉತ್ತರ ಕರ್ನಾಟಕದ ತುಟ್ಟುದಿ ಬೆಳಗಾವಿ ಕಡೆಗೆ ಭರ್ಜರಿಯಾಗಿ ಹೊರಟಿವೆ.

ಫ್ರೀ ಟಿಕೆಟ್ ನೀಡಿದ ಮೇಲೆ ಕೈ ಬೀಸಿ, ‘ ಎಲ್ಲರ ಪ್ರಯಾಣ ಸುಖವಾಗಿರಲಿ ‘ ಎಂದು ವಿಷ್ ಮಾಡಿ ಸ್ವೀಟ್ ಹಂಚಿಕೆ ಮಾಡಲಾಯಿತು.ಇಂದು ಮಧ್ಯಾಹ್ನ 1 ಗಂಟೆಯ ಕರ್ನಾಟಕದ ಎಲ್ಲಾ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಈ ಉಚಿತ ಸೌಲಭ್ಯ ಸಿಗಲಿದೆ. ರಾಜ್ಯದ ಬರೋಬ್ಬರಿ 18,609 ಬಸ್‍ಗಳು ಉಚಿತ ಪ್ರಯಾಣಕ್ಕೆ ನಿಯೋಜನೆ ಮಾಡಲಾಗಿದೆ. ರಾಜ್ಯದ 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಸಂಭವನೀಯ ಫಲಾನುಭವಿಗಳು ಎಂದು ಅಂದಾಜಿಸಲಾಗಿದ್ದು, ಕರ್ನಾಟಕದ ಮಟ್ಟಿಗೆ ಇದೊಂದು ಐತಿಹಾಸಿಕ ಉಚಿತ ಯೋಜನೆ.

ರಾಜ್ಯದ ಬಹುತೇಕ ಮಹಿಳೆಯರು.ಈ ಉಚಿತ ಯೋಜನೆಯ ಫುಲ್ ಲಾಭ ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ವಿವಿಧ ಮಹಿಳಾ ಗುಂಪುಗಳಾದ ಶ್ರೀ ಶಕ್ತಿ ಗುಂಪುಗಳು ಭಜನಾ ಮಂಡಳಿಗಳು ಮಹಿಳಾ ಸಂಘಟನೆಗಳು ಉಚಿತ ಬಸ್ ವ್ಯವಸ್ಥೆ ಆದ ನಂತರ ಟೂರ್ ಹೊಡೆಯುವ ಹಾಕಿಕೊಂಡಿವೆ. ಮಹಿಳೆಯರ ನೆಚ್ಚಿನ ಟೂರಿಸ್ಟ್ ಮತ್ತು ಶ್ರದ್ಧಾ ಕೇಂದ್ರಗಳಾದ ಕಟೀಲು ಮೈಸೂರು ಮತ್ತು ಇವರಿಗೆ ತಾವು ನೋಡದ ಹಲವು ಪ್ರದೇಶಗಳಿಗೆ ಆಯೋಜನೆಯ ಪ್ಲಾನ್ ಈಗಾಗಲೇ ಪ್ರಾರಂಭವಾಗಿದ್ದು, ಮಹಿಳೆಯರು ಸಂತಸ ಗೊಂಡಿದ್ದಾರೆ.

ಇದನ್ನೂ ಓದಿ:Ramalinga Reddy: ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ – ಸಾರಿಗೆ ಸಚಿವರ ಬಿಗ್ ಹೇಳಿಕೆ

You may also like

Leave a Comment