Congress 6th guarantee: ಮನೆಯ ಪರಿಸ್ಥಿತಿ ಪೂರ್ತಿ ಬದಲಾಗಿದೆ. ಎಲ್ಲವೂ ಕಾಂಗ್ರೆಸ್ ಗ್ಯಾರಂಟಿ ಗಳ ಕೊಡುಗೆ. ಮನೆಯ ಮಹಿಳೆಯರ ಕಾನ್ಫಿಡೆನ್ಸ್ ಇಮ್ಮಡಿಯಾಗಿದೆ. ಕಾರಣ ಕಾಂಗ್ರೆಸ್ ಮಹಿಳೆಯರಿಗೆ ಮತ್ತು ಅವರ ಖಾತೆಗೆ (ಮನೆಗೆ ) ನೀಡಿರುವ ಸೌಲಭ್ಯಗಳ ಮಹಿಮೆ.
ಗ್ಯಾರಂಟಿಗಳ(Congress 6th guarantee) ಬಗ್ಗೆ ಈಗ ಮಹಿಳೆಯರು ಥರಾವರಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 2,000 ರೂಪಾಯಿಗೆ ಅತ್ತೆ ಸೊಸೆ ಜಗಳ ಮಾಡ್ಕೋತಾರೆ ಎಂಬ ಹೇಳಿಕೆಗೆ ಮಹಿಳೆಯರದು ಬೇರೆಯದೇ ವಿವರಣೆ. ‘ ಹಾಗೂ ಜಗಳ ಆದ್ರೆ ತವರಿಗೆ ಹೋಗೋಕೆ ಈಸಿ ಆಯಿತು. ಹೇಗೂ ಬಸ್ಸಿನಲ್ಲಿ ಟಿಕೆಟ್ ಫುಲ್ ಫ್ರೀ ಮತ್ತು ಅರ್ಧಕ್ಕರ್ಧ ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲು ‘ ಎಂದು ಸ್ತ್ರೀಯರು ಆನಂದ ತುಂದಿಲರಾಗಿದ್ದಾರೆ.
ಉಚಿತ ಬಸ್ ಪ್ರಯಾಣದಿಂದ ಮಹಿಳೆಯರ ಖರ್ಚು ಕಡಿಮೆಯಾಗುತ್ತದೆ ಎಂದು ಕೆಲವು ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಅರ್ಧ ಬಸ್ ಅನ್ನು ಆಕ್ರಮಿಸಿಕೊಂಡರೆ, ಉಳಿದುದರಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಇತ್ಯಾದಿ ರಿಸರ್ವೇಶನ್ ಅನ್ನು ಕಳೆದು ಬಾಕಿ ಉಳಿದ ಚಿಲ್ಲರೆ ಸೀಟುಗಳಲ್ಲಿ ಗಂಡಸರು ಮೈ ಮತ್ತು ಮನಸ್ಸು ಮುದುರಿಕೊಂಡು ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ !
” ಹೆಣ್ಣಾಗಿ ಹುಟ್ಟಿ ಗೃಹಲಕ್ಷ್ಮಿಯಾದೆ,
2,000 ರೂಪಾಯಿ ತರುವ ಯಜಮಾನಿಯಾದೆ,
ಬಸ್ ನಲ್ಲಿ ಫ್ರೀಯಾಗಿ ಓಡಾಡುವ ಪ್ರಯಾಣಿಕಳಾದೆ,
ನೀನಾರಿಗಾದೆಯೋ ಎಲೆ ಪುರುಷನೇ…! ” ಇದು ಇವತ್ತಿನ ಪುರುಷರ ಪರಿಸ್ಥಿತಿ. ಕೇವಲ ಮಹಿಳೆಯರಿಗೆ 2,000 ರೂಪಾಯಿ ನೀಡೋದು ಮಾತ್ರವಲ್ಲ, ಮಹಿಳೆಯರನ್ನೇ ಮನೆಯ ‘ ಯಜಮಾನಿ ‘ಯನ್ನಾಗಿಸಿದೆ ನವಜಾತ ಕಾಂಗ್ರೆಸ್ ಸರ್ಕಾರ. ಅತ್ತ ಮುಖ್ಯಮಂತ್ರಿ ಪಟ್ಟ ಸಿಕ್ಕಷ್ಟೇ ಸಂತೋಷ ಮನೆಯ ಯಜಮಾನಿಗೆ ಆಗಿದೆ. ಇದಕ್ಕಿಂತ ಇನ್ನೊಂದು ಖುಷಿ ಬೇರೆ ಬೇಕೆ ?
ಇದೇ ರೀತಿಯ ಇನ್ನೊಂದು ಮೀಮ್ಸ್ ಈಗ ಗಮನ ಸೆಳೆಯುತ್ತಿದೆ. ” ಹೆಂಡತಿಯರೇ, ಉಚಿತ ಬಸ್ ಉಂಟೆಂದು ಪದೇ ಪದೇ ಜಗಳ ತೆಗೆದು ತವರು ಮನೆಗೆ ಹೋಗದಿರಿ, ಗರ್ಲ್ ಫ್ರೆಂಡ್ ಗೂ ಟಿಕೆಟ್ ಫ್ರೀ ಅನ್ನೋದನ್ನು ಮರೆಯದಿರಿ ” ಅನ್ನುವ ಜೋಕ್ ಕೂಡಾ ಆತ್ಯುತ್ಸಾಹಿ ಮಹಿಳೆಯರನ್ನು ಮೆಲ್ಲನೆ ಎಚ್ಚರಿಸುತ್ತಿದೆ.
ಈಗ ಮನೆಗೆ 10 ಕೆಜಿ ಅಕ್ಕಿ ಬರತ್ತೆ, ಇನ್ನು ವಿದ್ಯುತ್ ಬಿಲ್ ಕಟ್ಟದೆ ಹೋದರೂ ಕರೆಂಟ್ ಕಟ್ ಮಾಡುವ ಧೈರ್ಯ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಇಲ್ಲ. ಹಾಗಿದೆ ರಾಜ್ಯದ ಇವತ್ತಿನ ‘ ಗೃಹ ‘ ಸ್ಥಿತಿ.
ಈ ಮಧ್ಯೆ, ಅಕ್ಕಿಯ ಜೊತೆಗೆ ಸಿರಿಧಾನ್ಯ ಹಂಚಿಕೆ ಪ್ಲಾನ್ ಕೂಡ ಇದೆ ಸರ್ಕಾರದ ಬಳಿ. ಮಹಿಳೆಯರ ಖುಷಿಗೆ ಪಾರವೇ ಇಲ್ಲ ಎನ್ನುವಂತಾಗಿದೆ. ಆದರೂ ಈಗ ಕೆಲವರು ಸ್ತ್ರೀಯರು ಈಗ ನೀಡಿದ ಉಚಿತಗಳ ಕೊಡುಗೆಯಿಂದ ಪೂರ್ತಿ ತೃಪ್ತರಾದಂತೆ ಕಾಣಿಸುತ್ತಿಲ್ಲ. ‘ ಸರ್ಕಾರಿ ಬಸ್ಗಳಲ್ಲಷ್ಟೇ ಯಾಕೆ ಉಚಿತ ಪ್ರಯಾಣ? ಖಾಸಗಿ ಬಸ್ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ‘ ಎಂದು ಮಹಿಳೆಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಘೋಷಣೆ ಜಾರಿಗೂ ಮುನ್ನ ಈಗಾಗಲೇ ಬಸ್ನಲ್ಲಿ ಟಿಕೆಟ್ ಪಡೆಯಲು ಮಹಿಳೆಯರು ನಿರಾಕರಿಸಿದ್ದು, ಫ್ರೀಯಾಗಿ ಓಡಾಡಲು ಬಿಡಿ ಎಂದು ಸಿಬ್ಬಂದಿ ಜೊತೆ ಗಲಾಟೆ ಮಾಡುತ್ತಿದ್ದಾರೆ.
ಅದೇನೆ ಇರಲಿ, ಸರ್ಕಾರವು ಮಹಿಳೆಯರನ್ನೇ ಮನೆಯೊಡತಿ ಮಾಡಿಬಿಟ್ಟು, ಆಕೆಯ ಕೈಗೆ 2,000 ರೂಪಾಯಿಗಳ ಗರಿಗರಿ ನೋಟು ಇಟ್ಟು, ಉಚಿತ ಬಸ್ ಪ್ರಯಾಣದ ಆಫರ್ ಕೊಟ್ಟು, ಮನೆಯ ವಿದ್ಯುತ್ ಬಿಲ್ ಮನ್ನಾ ಮಾಡಿಟ್ಟ ಕಾರಣದಿಂದ ಕಳೆದೆರಡು ದಿನಗಳಿಂದ ಮಹಿಳೆಯರ ಹಮ್ಮು ಬಿಮ್ಮು ಜಾಸ್ತಿಯಾಗಿದೆ. ಪ್ರತಿಯೊಂದಕ್ಕೂ ಗಂಡನ ಪ್ಯಾಕೆಟ್ ಕಡೆಗೇ ನೋಡಬೇಕಿದ್ದ ಮಹಿಳಾ ಮಣಿಗಳು ಈಗ ಗಂಡನಿಗೆ ಕ್ಯಾರೇ ಮಾಡುತ್ತಿಲ್ಲ. ದುಡಿದು ಗಂಡ ಮನೆಗೆ ಬಂದರೂ ಹೆಂಡತಿ ಮೊಬೈಲ್ ನಲ್ಲಿ ಬ್ಯುಸಿ. ಕಾರಣ, ತಯಾರಾಗುತ್ತಿದೆ ಜೂನ್ 11 ರ ನಂತರ ಹೊರಡುವ ಟೂರಿಂಗ್ ಪ್ಲಾನ್ !!!
ಇದನ್ನೂ ಓದಿ: Smuggled Gold: KGF ಸಿನಿಮಾ ಸೀನ್ ‘ನ್ನೇ ಹೋಲುವ ಘಟನೆ: ಬಾಕ್ಸ್’ಗಟ್ಟಲೆ ಚಿನ್ನ ಸಮುದ್ರಕ್ಕೆ ಎಸೆದ್ರು !
