Home » Rahul Ghandi: ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ! ಸ್ಪೀಕರ್ ಕರೆದ ಸಭೆಯಲ್ಲಿ ರಾಹುಲ್ ಗೆ ಭಾರೀ ಮುಖಭಂಗ

Rahul Ghandi: ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ! ಸ್ಪೀಕರ್ ಕರೆದ ಸಭೆಯಲ್ಲಿ ರಾಹುಲ್ ಗೆ ಭಾರೀ ಮುಖಭಂಗ

by ಹೊಸಕನ್ನಡ
1 comment
Congress Leader Rahul gandhi

Congress leader Rahul Gandhi :ಕಾಂಗ್ರೆಸ್(Congress) ನಾಯಕ ಹಾಗೂ ಭಾರತದ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ (Congress leader Rahul Gandhi) ಅವರು ಇತ್ತೀಚೆಗೆ ಲಂಡನ್‌(Landon) ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಆರೋಪಿಗಳನ್ನು ಮಾಡಿದ್ದರು. ಅಂದು ಅವರಾಡಿದ ಮಾತುಗಳ ಕಾವು ಇನ್ನೂ ಆರಿಲ್ಲ. ವಿದೇಶಗಳಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಅನ್ನೋ ಕುರಿತು ತೀವ್ರವಾದ ಆರೋಪ, ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ.

ಯುಕೆಯಲ್ಲಿ ಕೆಂದ್ರವನ್ನು ಟೀಕಿಸುವ ಭರದಲ್ಲಿ ರಾಹುಲ್ ಅವರು ‘ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಅವರು ತಂದ ಯೋಜನೆಗಳ ವಿರುದ್ದ ವಿಪಕ್ಷಗಳು ಮಾತನಾಡುವಾಗ ಅವರ ಮೈಕ್ ಆಫ್ ಮಾಡಲಾಗುತ್ತದೆ. ಈ ಮೂಲಕ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಈ ಆರೋಪವನ್ನು ಕಾಂಗ್ರೆಸ್ ಹಾಗೂ ಡಿಎಂಕೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳು ತಳ್ಳಿ ಹಾಕಿದೆ. ಇದರ ಪರಿಣಾಮ ಸ್ಪೀಕರ್ ಕರೆದ ಬ್ಯೂಸಿನೆಸ್ ಅಡ್ವೆಸರಿ ಮೀಟಿಂಗ್‌ನಿಂದ ಕಾಂಗ್ರೆಸ್ ಹಾಗೂ ಡಿಎಂಕೆ(DMK) ಹೊರನಡೆದಿದೆ.

ಇಂದು ಮಧ್ಯಾಹ್ನ 1.30ಕ್ಕೆ ಲೋಕಸಭೆಯ(Parliment) ಕಲಾಪಗಳ ಕುರಿತು ಚರ್ಚಿಸಲು ಸ್ಪೀಕರ್(Speaker), ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದರು. ಇದಕ್ಕೂ ಮುನ್ನ ಸರ್ವ ಪಕ್ಷ ನಾಯಕರು ರಾಹುಲ್ ಗಾಂಧಿ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಕೇಂದ್ರದ ವಿರುದ್ಧ ಮಾತನಾಡುವ ನಾಯಕರ ಮೈಕ್ ಆಫ್ ಮಾಡಲಾಗುತ್ತಿದೆ ಅನ್ನೋ ಆರೋಪವನ್ನು ಎಲ್ಲಾ ಪಕ್ಷ ನಾಯಕರು ತಳ್ಳಿ ಹಾಕಿದ್ದಾರೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾತುಗಳನ್ನು ಬೆಂಬಲಿಸಿದ ಜೆಡಿಯು ಪಕ್ಷ ಕೂಡ ಮೈಕ್ ಆಫ್ ಆರೋಪನ್ನು ತಳ್ಳಿ ಹಾಕಿರುವುದು ಅಚ್ಚರಿ.

ಡಿಎಂಕೆ ಹಾಗೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಆರೋಪ ಸರಿಯಾಗಿದೆ ಎಂದು ವಾದಿಸಿದುರು. ಆದರೆ ಎಲ್ಲಾ ಪಕ್ಷಗಳು ರಾಹುಲ್ ಗಾಂಧಿ ಆರೋಪವನ್ನು ವಿರೋಧಿಸಿದರು. ಸಂಸತ್ತಿನಲ್ಲಿ ಮೈಕ್ ಆಫ್ ಮಾಡುವುದಿಲ್ಲ. ಇದು ಆಧಾರರಹಿತ ಸುಳ್ಳು ಆರೋಪ ಎಂದು ಸರ್ವ ಪಕ್ಷ ನಾಯಕರು ಹೇಳಿದರು. ಇದರಿಂದ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಹಾಗೂ ಡಿಎಂಕೆ ಸ್ಪೀಕರ್ ಕರೆದಿದ್ದ ಬ್ಯೂಸಿನೆಸ್ ಅಡ್ವೈಸರಿ ಸಭೆಯಿಂದ ಹೊರನಡೆಯುವಂತಾಯಿತು.

ಇದೀಗ ರಾಹುಲ್ ಗಾಂಧಿ ಆರೋಪವನ್ನು ಕಾಂಗ್ರೆಸ್ ಮಿತ್ರಪಕ್ಷಗಳೇ ವಿರೋಧಿಸಿದೆ. ಇದು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿದೆ. ಅಲ್ಲದೆ ಸಭೆಯಿಂದ ಹೊರನಡೆದ ಕಾಂಗ್ರೆಸ್ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ. ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮತ್ತೆ ಅದೇ ಆರೋಪವನ್ನು ಮಾಡಿದರು.

You may also like

Leave a Comment