Home » Congress Government: 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಯ್ತು ಸಂಕಷ್ಟ! 6ನೇ ಗ್ಯಾರಂಟಿಗೆ ಗಂಟುಬಿದ್ದ ಜನ – ಏನದು ಗೊತ್ತಾ?

Congress Government: 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಯ್ತು ಸಂಕಷ್ಟ! 6ನೇ ಗ್ಯಾರಂಟಿಗೆ ಗಂಟುಬಿದ್ದ ಜನ – ಏನದು ಗೊತ್ತಾ?

1 comment
Congress Government

Congress Government: ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಗ್ಯಾರೆಂಟಿ ಯೋಜನೆಗಳ (Guarentee)ಜಾರಿಗೆ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಹರಸಾಹಸ ಪಟ್ಟು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇದೀಗ ಆರನೇ ಗ್ಯಾರೆಂಟಿ ಜಾರಿಗೆ ಜನರು ದುಂಬಾಲು ಬೀಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯ ಸಂದರ್ಭ ನೀಡಿದ್ದ ಭರವಸೆ ಅನುಸಾರ ಆರನೇ ಗ್ಯಾರಂಟಿಯನ್ನು ತಕ್ಷಣವೇ ಜಾರಿಗೆ ತರುವಂತೆ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಆಗ್ರಹ ಮಾಡಿದ್ದಾರೆ. ಹೀಗಾಗಿ, ಒಂದು ಸಮಸ್ಯೆ ಮುಗಿಯಿತು ಎಂಬ ನಿಟ್ಟುಸಿರು ಬಿಡುತ್ತಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ (Congress Government) ಮತ್ತೊಂದು ಸಂಕಷ್ಟ ಎದುರಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಆರನೇ ಗ್ಯಾರಂಟಿ ಯೋಜನೆಯ ಶೀಘ್ರ ಅನುಷ್ಟಾನಕ್ಕೆ ಒತ್ತಾಯ ಮಾಡಿದ್ದಾರೆ. ಈ ನಡುವೆ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಮುಂದಾಗಿದ್ದು ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಹೊಸ ನಿರ್ಧಾರಕ್ಕೆ ಅಂಗನವಾಡಿ ಸಿಬ್ಬಂದಿಗಳು ಗರಂ ಆಗಿದ್ದಾರೆ. ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ‌ ತರಗತಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಸೆಪ್ಟೆಂಬರ್ 15ರಂದು ಶುಕ್ರವಾರ ಬೃಹತ್ ಪ್ರತಿಭಟನೆಗೆ (Protest) ಅಂಗನವಾಡಿ ಕಾರ್ಯಕರ್ತೆಯರು ಮುಂದಾಗಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ‌ ತರಗತಿ ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು, 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭಕ್ಕೆ ಸಿದ್ದತೆ ನಡೆಸಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದು ಅಂಗನವಾಡಿ ಕಾರ್ಯಕರ್ತೆಯರ ಸಿಟ್ಟಿಗೆ ಕಾರಣವಾಗಿದೆ.ಎರಡು ಇಲಾಖೆಯ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಬೀಳುವ ಲಕ್ಷಣಗಳು ದಟ್ಟವಾಗಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ಸೂಚಿಸಿದ್ದಾರೆ. ಹೀಗಾಗಿ, ಅಂಗನವಾಡಿ ಕಾರ್ಯಕರ್ತೆಯರು ಸೆಪ್ಟೆಂಬರ್ 15ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Education News: ರಾಜ್ಯದ ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹೊಸ ಸೂಚನೆ- ಸರ್ಕಾರ ಮಾಡ್ತು ಮಹತ್ವದ ಘೋಷಣೆ !! ಏನದು ಗೊತ್ತಾ?

You may also like

Leave a Comment