Home » Congress guarantees: ಅಬ್ಬಬ್ಬಾ.. ಕಾಂಗ್ರೆಸ್ಸಿನ ಉಚಿತ ಕೊಡುಗೆಗಳನ್ನು ಅನುಷ್ಠಾನಗೊಳಿಸೋಕೆ ಬೇಕು 62,000 ಕೋಟಿ ರೂಪಾಯಿ!!!

Congress guarantees: ಅಬ್ಬಬ್ಬಾ.. ಕಾಂಗ್ರೆಸ್ಸಿನ ಉಚಿತ ಕೊಡುಗೆಗಳನ್ನು ಅನುಷ್ಠಾನಗೊಳಿಸೋಕೆ ಬೇಕು 62,000 ಕೋಟಿ ರೂಪಾಯಿ!!!

by ಹೊಸಕನ್ನಡ
0 comments
Congress guarantees

Congress guarantees Cost: ಕರ್ನಾಟಕ(Karmataka) ದಲ್ಲಿ ಐದು ಗ್ಯಾರಂಟಿ(5 guarantees) ಗಳನ್ನು ನೀಡಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ, ಗದ್ದುಗೆಯೇರಿದ ನಂತರ ಅವುಗಳನ್ನು ಚಾಚೂ ತಪ್ಪದೇ ಅನುಷ್ಠಾನ ಮಾಡಬೇಕಿದೆ. ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿರುವ ಕಾರಣವೇ ಕಾಂಗ್ರೆಸ್‌(Congress) ಪಕ್ಷಕ್ಕೆ ಈ ಪರಿ ಬಹುಮತ ಸಿಗಲು ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಹೀಗಾಗಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್ಗೆ ವಾರ್ಷಿಕವಾಗಿ ಒಟ್ಟು 62 ಸಾವಿರ ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.

ಹೌದು ಸ್ನೇಹಿತರೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಕಾಂಗ್ರೆಸ್‌(Congress) ಪಕ್ಷ 135 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ(BJP)ಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ ಕಾಂಗ್ರೆಸ್‌ ಪಕ್ಷಕ್ಕೆ ಈಗ ಚುನಾವಣಾ ಭರವಸೆಗಳನ್ನು ಈಡೇರಿಸುವ ಸವಾಲು ಇದೆ. ಎಕನಾಮಿಕ್‌ ಟೈಮ್ಸ್‌(Economic Times)ವರದಿ ಪ್ರಕಾರ, 5 ಗ್ಯಾರೆಂಟಿ ಸೇರಿ ಉಳಿದ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ, ಅಂದರೆ ಪ್ರಣಾಳಿಕೆಯಲ್ಲಿ ನೀಡಿದ್ದ ‘ಉಚಿತ ಭಾಗ್ಯ’ಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ನಗದು ಪಾವತಿ ಮತ್ತು ಉಚಿತ ವಿದ್ಯುತ್‌ ಯೋಜನೆ ಜಾರಿಗಾಗಿಯೇ ರಾಜ್ಯ ಸರಕಾರಕ್ಕೆ ವರ್ಷಕ್ಕೆ 62,000 ಕೋಟಿ ರೂ. ವೆಚ್ಚವಾಗಲಿದೆ (Congress guarantees Cost). ಅಂದರೆ ಬಜೆಟ್‌ನ ಸುಮಾರು ಶೇ.20ರಷ್ಟು ಭಾಗ ‘ಉಚಿತ ಭಾಗ್ಯ’ಗಳಿಗೆ ಬೇಕು ಎಂದು ಕೆಲವು ಲೆಕ್ಕಾಚಾರಗಳು ಹೇಳಿವೆ. ಈ ದೊಡ್ಡ ‘ಹೊರೆ’ಯಿಂದಾಗಿ ಖಂಡಿತವಾಗಿಯೂ ರಾಜ್ಯ ಬಜೆಟ್‌ ಮೇಲೆ ದೊಡ್ಡ ನಕಾರಾತ್ಮಕ ಪ್ರಭಾವ ಉಂಟಾಗಲಿದೆ ಎಂದು ಲೆಕ್ಕಾಚಾರಗಳು ಹೇಳಿವೆ.

ಇಷ್ಟೇ ಅಲ್ಲದೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಮತ್ತು ಸರಕಾರಿ ಇಲಾಖೆಗಳಾದ್ಯಂತ 2. 5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿಯೂ ಕಾಂಗ್ರೆಸ್‌ ಭರವಸೆ ನೀಡಿದೆ. ಇದು ರಾಜ್ಯದ ಸಂಬಳದ ಬಿಲ್‌ ಅನ್ನು ಹೆಚ್ಚಿಸುತ್ತದೆ. ಈ ಅಂಶಗಳೂ ಆರ್ಥಿಕವಾಗಿ ಸರಕಾರಕ್ಕೆ ಹೊರೆಯಾಗಲಿವೆ.

ಪ್ರಮುಖ ಉಚಿತ ಭಾಗ್ಯಗಳಿಗೆ ಸರಕಾರ ಖರ್ಚು ಮಾಡಬಹುದಾದ ಮೊತ್ತವು ಹಿಂದಿನ ಹಣಕಾಸು ವರ್ಷದಲ್ಲಿನ ವಿತ್ತೀಯ ಕೊರತೆಯಷ್ಟೇ ದೊಡ್ಡದಾಗಿದೆ. ಕರ್ನಾಟಕದ ಬಜೆಟ್‌ 2023-24ರಲ್ಲಿ2022-23ನೇ ಸಾಲಿನ ವಿತ್ತೀಯ ಕೊರತೆಯು 60,581 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ. ಇದು ಒಟ್ಟು ರಾಜ್ಯ ದೇಶೀಯ ಉತ್ಪನ್ನದ(ಜಿಎಸ್‌ಡಿಪಿ) ಶೇ.2.60ರಷ್ಟಾಗಿದೆ.

ಈಗ, ದೊಡ್ಡ ರಾಜ್ಯಗಳ ಪೈಕಿ ಜಿಎಸ್‌ಟಿ(GST) ಸಂಗ್ರಹದಲ್ಲಿ ಕರ್ನಾಟಕವು ಅತ್ಯಧಿಕ ಬೆಳವಣಿಗೆ ದರವನ್ನು ದಾಖಲಿಸಿದೆ. 2022-23ಕ್ಕೆ, ಆದಾಯ ಸಂಗ್ರಹಣೆಯ ಗುರಿಯನ್ನು 72,000 ಕೋಟಿ‌ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಜಿಎಸ್‌ಟಿ ಪರಿಹಾರವನ್ನು ಹೊರತುಪಡಿಸಿ 83,010 ಕೋಟಿಯ ರೂಪಾಯಿ ಆದಾಯ ಸಂಗ್ರಹವನ್ನು ಜನವರಿ ಅಂತ್ಯದ ವೇಳೆಗೆ ಸಾಧಿಸಲಾಗಿದೆ. ಇದು ಬಜೆಟ್ ಅಂದಾಜಿಗಿಂತ 15 ಪ್ರತಿಶತ ಹೆಚ್ಚಾಗಿದೆ.

ಮುಂಬರುವ ವರ್ಷಗಳಲ್ಲಿಕರ್ನಾಟಕದ ಆರ್ಥಿಕತೆಯು ದೊಡ್ಡದಾಗಿ ಬೆಳೆಯಲು ಸಿದ್ಧವಾಗಿದ್ದರೂ, 62,000 ಕೋಟಿ ರೂ. ವೆಚ್ಚದ ‘ಉಚಿತ ಭಾಗ್ಯ’ವು ಸಮಸ್ಯೆಯನ್ನು ಸೃಷ್ಟಿಸಬಹುದು. ಕರ್ನಾಟಕದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯ ಹೊರತಾಗಿಯೂ, 62,000 ಕೋಟಿ ರೂಪಾಯಿಯ ಪ್ರಮುಖ ಉಚಿತ ಕೊಡುಗೆಗಳಿಗೆ ಹಣ ಒದಗಿಸುವುದು ಇನ್ನೂ ಸವಾಲಾಗಿಯೇ ಉಳಿಯಬಹುದು.

ಅಂದಹಾಗೆ ಉಚಿತ ಭಾಗ್ಯಗಳನ್ನು ನೀಡಲು ಹಣ ಹೇಗೆ ಹೊಂದಿಸುವಿರಿ ಎನ್ನುವ ಪ್ರಶ್ನೆಗೆ ಕರ್ನಾಟಕದ ಉಸ್ತುವಾರಿ ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ(Randeep Singh Surjewala) ಅವರು ಟೈಮ್ಸ್‌ ಆಫ್‌ ಇಂಡಿಯಾಕ್ಕೆ ವಿವರಿಸಿದ್ದು, ”ಕಾಂಗ್ರೆಸ್‌ನ ಫ್ರೀಬೀಸ್‌ ಜಾರಿಗೆ ರಾಜ್ಯ ಬಜೆಟ್‌ನ ಶೇ.15ಕ್ಕಿಂತ ಹೆಚ್ಚು ಹಣ ವೆಚ್ಚವಾಗುವುದಿಲ್ಲ. ಅಲ್ಲದೇ, ಮುಂದಿನ 5 ವರ್ಷಗಳಲ್ಲಿರಾಜ್ಯ ಬಜೆಟ್‌ನ ಗಾತ್ರವು ಹೆಚ್ಚಾಗುವ ನಿರೀಕ್ಷೆ ಇದೆ” ಎಂದಿದ್ದಾರೆ.

ಕಾಂಗ್ರೆಸ್‌ ಪ್ರಮುಖ ಗ್ಯಾರಂಟಿಗಳು:
• ಕುಟುಂಬದ ಪ್ರತಿ ಮಹಿಳೆಗೆ ಮಾಸಿಕ 2,000 ರೂ. ನೆರವು.
• ಪ್ರತಿ ನಿರುದ್ಯೋಗಿ ಡಿಪ್ಲೋಮಾದಾರರಿಗೆ ತಿಂಗಳಿಗೆ 1,500 ರೂ.
• ಪದವೀಧರರಿಗೆ ತಿಂಗಳಿಗೆ 3,000 ರೂ. ಭತ್ಯೆ
• ರಾಜ್ಯ ಸರಕಾರದ ಬಸ್‌ಗಳಲ್ಲಿಮಹಿಳೆಯರಿಗೆ ಉಚಿತ ಪ್ರಯಾಣ.
• ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್‌ ವಿದ್ಯುತ್‌ ಉಚಿತ.

ಇತರ ಭರವಸೆಗಳೇನು?
• ಆಳ ಸಮುದ್ರದ ಮೀನುಗಾರಿಕೆಗೆ ಪ್ರತಿ ವರ್ಷ 500 ಲೀಟರ್‌ ತೆರಿಗೆಮುಕ್ತ ಡೀಸೆಲ್‌
• ಮೀನುಗಾರಿಕೆ ರಜೆಯ ಸಮಯದಲ್ಲಿ ಎಲ್ಲಾಸಮುದ್ರ ಮೀನುಗಾರರಿಗೆ 6,000 ರೂ.
• ಗ್ರಾಮೀಣ ಮಹಿಳೆಯರು/ಯುವಕರನ್ನು ಒಳಗೊಂಡ ಹಳ್ಳಿಗಳಲ್ಲಿ ಕಾಂಪೋಸ್ವ್‌/ಗೊಬ್ಬರ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಭರವಸೆ.
• ಪ್ರತಿ ಕೆ.ಜಿ.ಗೆ 3 ರೂ.ನಂತೆ ಹಸುವಿನ ಸಗಣಿ ಖರೀದಿಸಲು ಭರವಸೆ.

ಇದನ್ನೂ ಓದಿ:ISRO News: ಅಂತರಿಕ್ಷದಲ್ಲೇ ತಂಗೋ ಇಸ್ರೋ ಗಗನಯಾತ್ರಿಗಳಿಗೆ ಸವಿಯಲು ಸಿಗುತ್ತೆ ಮೈಸೂರಿನ ಇಡ್ಲಿ-ಸಾಂಬಾರ್‌! ಜೊತೆಗೆ ಬಿರಿಯಾನಿಯೂ ರೆಡಿ!

You may also like

Leave a Comment