Home » Dr G parameshwar: ಮುಸ್ಲಿಂಮರಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಕಾಂಗ್ರೆಸ್ ನೀತಿ – ಗೃಹ ಸಚಿವ ಡಾ ಪರಮೇಶ್ವರ್!!

Dr G parameshwar: ಮುಸ್ಲಿಂಮರಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಕಾಂಗ್ರೆಸ್ ನೀತಿ – ಗೃಹ ಸಚಿವ ಡಾ ಪರಮೇಶ್ವರ್!!

1 comment
Dr G parameshwar

Dr G parameshwar: ದೇಶದಲ್ಲಿ ಅನೇಕರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಹೆಚ್ಚು ಅವಕಾಶಗಳು ಸಿಗಬೇಉ. ಅಂತೆಯೇ ಮುಸ್ಲಿಂಮರು ಕೂಡ. ಹೀಗಾಗಿ ಅವರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ನೀಡಬೇಕೆಂಬುದು ನಮ್ಮ ಆಸೆ, ಕಾಂಗ್ರೆಸ್ ನೀತಿ ಕೂಡ ಅದೇ ಎಂದು ಗೃಹ ಸಚಿವ ಡಾ ಪರಮೇಶ್ವರ್(Dr G Parameshwar)ಅವರು ಹೇಳಿದ್ದಾರೆ.

ಹೌದು, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಲಿತರು, ಹಿಂದುಳಿದವರು, ಮೂಲನಿವಾಸಿಗಳು ಅಂತಾ ವ್ಯಾಖ್ಯಾನ ಮಾಡಿದ್ದಾರೆ. ಯಾವ ಸಮುದಾಯಗಳು ಹಿಂದೆ ಉಳಿದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಇರುವವರನ್ನು ಹಿಂದುಳಿದವರು ಎಂದು ಕರೆಯುತ್ತೇವೆ. ಈ ದೇಶದಲ್ಲಿ 16% ರಿಂದ 18% ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಹಿಂದುಳಿದವರು ಅಂತೀವಿ. ಸಂವಿಧಾನದ ಆಶಯಗಳಂತೆ ಅವರಿಗೆ ಅವಕಾಶಗಳು ಸಿಗಬೇಕು. ಅದೇ ಕಾಂಗ್ರೆಸ್ ಪಕ್ಷದ ನೀತಿ. 1885 ರಲ್ಲಿ ಮಾಡಿದ ನಮ್ಮ ನೀತಿಗಳು ಇನ್ನೂ ಬದಲಾಗಿಲ್ಲ. ಅಲ್ಪ ಸಂಖ್ಯಾತರಿಗೆ ನಾವು ಕಾಂಗ್ರೆಸ್ ಪಕ್ಷದವರು ಹೆಚ್ಚಿನ ಪ್ರೋತ್ಸಾಹ ಕೊಡ್ತೀವಿ ಎಂದು ಹೇಳಿದ್ದಾರೆ.

You may also like

Leave a Comment