Home » Gruha Lakshmi Scheme: ಗೃಹಲಕ್ಷ್ಮೀ ಹಣ ಬರದೇ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ: 3 ಕಂತಿನ ಹಣ ಒಟ್ಟಿಗೆ ಜಮಾ! ಈ ರೀತಿ ಚೆಕ್ ಮಾಡಿಕೊಳ್ಳಿ

Gruha Lakshmi Scheme: ಗೃಹಲಕ್ಷ್ಮೀ ಹಣ ಬರದೇ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ: 3 ಕಂತಿನ ಹಣ ಒಟ್ಟಿಗೆ ಜಮಾ! ಈ ರೀತಿ ಚೆಕ್ ಮಾಡಿಕೊಳ್ಳಿ

1 comment
Gruha Lakshmi Scheme

Gruha Lakshmi Scheme: ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಹಣ ಬರದೇ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ ನೀಡಲಾಗಿದೆ. ಹೌದು, ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 3 ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ.

ಸದ್ಯ ಕರ್ನಾಟಕ ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್‌ಡೇಟ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲಾದ ಮಹಿಳೆಯರಿಗೆ ಆಧಾರ್ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಪ್ರತೀ ತಿಂಗಳು 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.

ಮುಖ್ಯವಾಗಿ ಈ ಮೂಲಕ ನೀವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಬಂದಿರುತ್ತದೆ ಎಂದು ತಿಳಿದುಕೊಳ್ಳಬಹುದು. ಅದಕ್ಕಾಗಿ ಈ ಸುಲಭ ಹಂತಗಳನ್ನು ಪಾಲಿಸಿ.

ಮೊದಲು ನೀವು ಪ್ಲೇ ಸ್ಟೋರ್‌ಗೆ ಹೋಗಿ DBT ಕರ್ನಾಟಕ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆಪ್ ಅನ್ನು ತೆರೆದ ತಕ್ಷಣ ನಿಮಗೆ ಕೆಲವು ಪರ್ಮಿಷನ್ ಗಳನ್ನು ಕೇಳಿದರೆ ನೀವು ಅದನ್ನು ಅನುಮತಿಸಿ ಎಂದು ಕ್ಲಿಕ್ ಮಾಡಿ. ಅಲ್ಲಿ ನೀವು ಯಾರ ಸ್ಟೇಟಸ್ ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಕಾರ್ಡ್ ಎಂಟ್ರಿ ಮಾಡಿದಾಗ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆ OTP ಯನ್ನು ಅಲ್ಲಿ ಎಂಟ್ರಿ ಮಾಡಿ. ನಂತರ mPIN ಕ್ರಿಯೇಟ್ ಮಾಡಲು ಕೇಳಿದಾಗ, ನೀವು ನಾಲ್ಕು ಸಂಖ್ಯೆಗಳನ್ನು ಸೆಕ್ಯೂರಿಟಿ ಕೋಡ್ ಆಗಿ ಸೆಲೆಕ್ಟ್ ಮಾಡಿ ನಮೂದಿಸಿ ಮತ್ತೊಮ್ಮೆ ಅದನ್ನು ಹಾಕುವ ಮೂಲಕ ಖಾತರಿ ಮಾಡಿ. ಅಲ್ಲಿ ನೀವು ಯಾವ ಫಲಾನುಭವಿಗಳ ವಿವರವನ್ನು ಪರಿಶೀಲಿಸುತ್ತೀರಿ ಅವರ ಆಧಾರ್ ಕಾರ್ಡ್ ಡೀಟೇಲ್ಸ್ ತೆರೆಯ ಮೇಲೆ ಬರುತ್ತದೆ. ನಂತರ ಅದರ ಮೇಲೆ ಪೇಮೆಂಟ್ ಸ್ಟೇಟಸ್ ಎಂಬ ಆಪ್ಪನ್ ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದ ಯಾವ ಯೋಜನೆಗಳಿಂದ DBT ಮೂಲಕ ಹಣ ವರ್ಗಾವಣೆಯಾಗಿದೆ ಎಂಬ ಸಂಪೂರ್ಣ ವಿವರ ದೊರೆಯುತ್ತದೆ.

You may also like

Leave a Comment