Home » Congress-sitting MLA’s brother attacked: ಕಾಂಗ್ರೆಸ್ ಹಾಲಿ ಶಾಸಕನ ಸಹೋದರನ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್; ವಿಡಿಯೋ ವೈರಲ್​

Congress-sitting MLA’s brother attacked: ಕಾಂಗ್ರೆಸ್ ಹಾಲಿ ಶಾಸಕನ ಸಹೋದರನ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್; ವಿಡಿಯೋ ವೈರಲ್​

0 comments
Congress-sitting MLA's brother attacked

Congress-sitting MLA’s brother attacked: ನಿನ್ನೆ ಎಲ್ಲಾ ಕಡೆ ಮತದಾನದ ಪ್ರಕ್ರಿಯೆ ಮುಗಿದಿದೆ. ಆದರೆ ಈ ಶಾಂತಿಯುತ ಮತದಾನದ ಮಧ್ಯೆ ರಣಭೀಕರ ಘಟನೆಯೊಂದು ನಡೆದು ಹೋಗಿದೆ. ಹೌದು, ನಿನ್ನೆ ಮತದಾನದ ಬಳಿಕ ಸಂಜೆ ಸುಮಾರು 6.30ರ ಸುಮಾರಿಗೆ ಶಾಸಕರ ಸಹೋದರ ಸಿದ್ಧನಗೌಡ, ಮಸ್ಕಿ ಪಟ್ಟಣದ ಹಳೆ ಬಸ್‌ ನಿಲ್ದಾಣದ ಬಳಿಯ ಬೂತ್‌ಗಳ ಬಳಿ ಕಾರ್‌ನಲ್ಲಿ ಹೋಗುತ್ತಿದ್ದಂತೆ, ಅಲ್ಲಿ ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಾಗ, ಅಲ್ಲೇ ಹೊಂಚು ಹಾಕಿಕೊಂಡು ಕುಳಿತಿದ್ದ ಗ್ಯಾಂಗ್‌ವೊಂದು ಶಾಸಕರ ಸಹೋದರ ಸಿದ್ದನಗೌಡ ಹಾಗೂ ಆತನ ಜೊತೆಗಿದ್ದವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆಂದು ವರದಿಯಾಗಿದೆ. ನಡು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯಲಾಗಿದೆ.

ಈಗ ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯೇ ಚಿಕಿತ್ಸೆಗೊಳಪಟ್ಟಿರುವ ಸಿದ್ದನಗೌಡ. ಈತ ಹಾಲಿ ಕಾಂಗ್ರೆಸ್‌ ಶಾಸಕ ಬಸನಗೌಡ ತುರ್ವಿಹಾಳ (Basanagouda Turuvihal) ಅವರ ಸಹೋದರ.

ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಕಮಲ ಪಕ್ಷ ಸೇರಿದ್ದ ಈಗಿನ ಮಸ್ಕಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಮತ್ತು ಕಾಂಗ್ರೆಸ್‌ನ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ನಡುವೆ ಪೈಪೋಟಿ ಇತ್ತು. ಹಾಗಾಗಿ ಜಿದ್ದಾಜಿದ್ದಿನ ಫೈಟ್‌ ಇದೆ. ಇದು ನಿನ್ನೆ ಈ ರೂಪದಲ್ಲಿ ಬದಲಾಗಿದೆ.

ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಸಹೋದರ ಸಿದ್ದನಗೌಡನ ಮೇಲೆ ಬಿಜೆಪಿಯ ಕಾರ್ಯಕರ್ತರ ಗುಂಪು ಬೇಕಂತಲೇ ದಾಳಿ ಮಾಡಿ (Congress-sitting MLA’s brother attacked) ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಇತ್ತ ಘಟನೆಯಲ್ಲಿ ಸಿದ್ದನಗೌಡ, ಮೌಲಾನಾ ಸಾಬ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಲ್ಲೆ ವೀಡಿಯೋ ವೈರಲ್‌ ಆಗಿದ್ದು, ಹಲ್ಲೆಗೊಳಗಾದವರು ದೂರು ನೀಡಿದ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:Officials forgot EVM machines: ಅಯ್ಯೋ ದೇವ್ರೇ…ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಅಧಿಕಾರಿಗಳು! ಮುಂದೇನಾಯ್ತು?

You may also like

Leave a Comment