Home » K S Eshwarappa: ಈಶ್ವರಪ್ಪ ಪಕ್ಷೇತರ ಸ್ಪರ್ಧೆಗೆ ಕಾಂಗ್ರೆಸ್ ಬೆಂಬಲ !!

K S Eshwarappa: ಈಶ್ವರಪ್ಪ ಪಕ್ಷೇತರ ಸ್ಪರ್ಧೆಗೆ ಕಾಂಗ್ರೆಸ್ ಬೆಂಬಲ !!

1 comment
K S Eshwarappa

K S Eshwarappa: ಬಿಜೆಪಿಯಿಂದ ಮಗನಿಗೆ ಹಾವೇರಿ ಲೋಕಸಭಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಶಿವಮೊಗ್ಗದಿಂದಲೇ ಪಕ್ಷೇತರವಾಗಿ ಕಣಕ್ಕಿಳಿಯಲು ಮುಂದಾಗಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪನ(KS Eshwarappa)ವರಿಗೆ ಕಾಂಗ್ರೆಸ್ ನಾಯಕರು ಬೆಂಬಲ ಘೋಷಿಸಿದ್ದಾರೆ.

ಇದನ್ನೂ ಓದಿ: Holi colour to Muslim lady: ಮುಸ್ಲಿಂ ಮಹಿಳೆಗೆ ಹೋಳಿ ಬಣ್ಣ ಬಳಿದ ಹುಡುಗರು- ಮೈನರ್ ಹುಡುಗರ ಸಹಿತ ನಾಲ್ವರ ಬಂಧನ !

ಹೌದು, ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿ(BJP) ಅಭ್ಯರ್ಥಿ ವಿರುದ್ಧ ಬಂಡಾಯ ಸ್ಪರ್ಧೆಗೆ ಇಳಿದಿರುವ ಈಶ್ವರಪ್ಪನವರಿಗೆ ಕಾಂಗ್ರೆಸ್ ನಾಯಕರು ಬೆಂಬಲ ಘೋಷಿಸಿದ್ದಾರೆ. ಈ ಕುರಿತು ಸ್ವತಃ ಈಶ್ವರಪ್ಪನವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದು ನನ್ನ ನಿರೀಕ್ಷೆ ಮೀರಿ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್(Congress)ನಿಂದಲೇ ನನಗೆ ಸಾಕಷ್ಟು ಬೆಂಬಲ ಸಿಕ್ಕಿದ್ದು, ಎಲ್ಲರೂ ಕಾಲ್ ಮಾಡಿ, ಮನೆಗೂ ಬಂದು ಸಪೋರ್ಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೆ ಇಷ್ಟು ವರ್ಷ ಬಿಜೆಪಿಯಲ್ಲಿದ್ದ ನೀವು ಇಂದು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೀರಿ. ಕುಟುಂಬದ ರಾಜಕಾರಣ ಅಳಿಸಲು ಯತ್ನಿಸುತ್ಥಿದ್ದೀರಿ. ಹಿಂದುತ್ವದ ಮನೋಭಾವ ಹೊಂದಿರುವ ನಿಮೆಗೆ, ಹಿಂದೂಗಳ ಬೆಂಬಲಕ್ಕೆ ಮುಂದಾಗಿರುವ ನಿಮಗೆ ನಮ್ಮ ಪೂರ್ತಿ ಬೆಂಬಲ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಈಶ್ವರಪ್ಪನವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

You may also like

Leave a Comment