Home » Mohiuddin Bava: ಜಸ್ಟ್‌ ಒಂದು ಫೋನ್ ಕರೆಯಿಂದ ಟಿಕೆಟ್‌ ಕಳೆದುಕೊಂಡ ಮೊಯಿದ್ದಿನ್ ಬಾವಾ, ‘ಬಾಮೈದ ‘ ನಿಗೆ ಒಲಿದ ಅದೃಷ್ಟ !

Mohiuddin Bava: ಜಸ್ಟ್‌ ಒಂದು ಫೋನ್ ಕರೆಯಿಂದ ಟಿಕೆಟ್‌ ಕಳೆದುಕೊಂಡ ಮೊಯಿದ್ದಿನ್ ಬಾವಾ, ‘ಬಾಮೈದ ‘ ನಿಗೆ ಒಲಿದ ಅದೃಷ್ಟ !

1 comment
Mohiuddin Bava

Mohiuddin Bava: ಬೆಂಗಳೂರು: ಇನ್ನೇನು ಕೈ ತಲುಪಲಿದ್ದ ಪಕ್ಷದ ಟಿಕೆಟ್ ಅನ್ನು ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮೊಯಿದ್ದಿನ್ ಬಾವಾ (Mohiuddin Bava) ಕ್ಷಣಗಳಲ್ಲಿ ಕಳೆದುಕೊಂಡಿದ್ದಾರೆ. ಈಗ ಮೊಯಿದ್ದಿನ್ ಬಾವಾರ ಪಾಲಾಗಬೇಕಿದ್ದ ಟಿಕೆಟ್ ಬಾಮೈದನ ( ಮತ್ಯಾರದೋ ಬಾಮೈದ!) ಪಾಲಾಗಿದೆ ! ಅಷ್ಟಕ್ಕೂ ಟಿಕೆಟ್ ಕಳೆದುಕೊಳ್ಳಲು ಕಾರಣ ಒಂದು ಫೋನ್ ಕರೆ.

ಸಿದ್ದರಾಮಯ್ಯ (Siddaramaiah) ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್‌ (DK Shivakumar) ಬಣದ ಇನಾಯತ್ ಅಲಿ (Inayat Ali) ಮಧ್ಯೆ ಮಂಗಳೂರು ಉತ್ತರ (Mangalore North) ಕ್ಷೇತ್ರದ ಟಿಕೆಟ್‌ಗೆ ಭಾರೀ ಫೈಟ್‌ ನಡೆಯುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಇಬ್ಬರು ಬಾರಿ ಪೈಪೋಟಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೂ ಮೊಯಿದ್ದೀನ್ ಭಾವ ಅವರ ಕೈ ಮೇಲಿತ್ತು. ಇನ್ನೇನು ಟಿಕೆಟ್ ಸಿಕ್ಕಿ, ಬಿಫಾರಂ ಕೈ ತಲುಪಲು ಕೇವಲ ಗಂಟೆಗಳ ಕಾಲ ಮಾತ್ರ ಬಾಕಿ ಇತ್ತು.

ಮಾಜಿ‌ ಶಾಸಕ‌ ಮೊಯಿದ್ದಿನ್ ಬಾವಾಗೆ ಟಿಕೆಟ್ ಫೈನಲ್ ಬಹುತೇಕ ಆಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲೇ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಪಟ್ಟಿ ಬಿಡುಗಡೆಗೆ ಮುನ್ನ ಬಾವಾ ಎಡವಟ್ಟು ಮಾಡಿಕೊಂಡಿದ್ದರು. ಅನ್ಯ ಪಕ್ಷವೊಂದರ ಪ್ರಭಾವಿ ನಾಯಕರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (Mallikarjun kharge) ಮೊಯಿದ್ದಿನ್ ಬಾವಾ ಒಂದು ಕರೆ ಮಾಡಿಸಿದ್ದರು. ಅಷ್ಟೇ, ಕರೆ ಕಡಿತ ಆಗುತ್ತಿದ್ದಂತೆ ಇತ್ತ ಇನ್ನೇನು ಪ್ರಿಂಟ್ ಆಗಲಿದ್ದ ಬಿಫಾರಂ ಪ್ರಿಂಟರ್ ನ ಕುತ್ತಿಗೆಯಲ್ಲಿ ಸಿಕ್ಕಿ ಬಿದ್ದಿದೆ !!!

ಅನ್ಯ ಪಕ್ಷದ ಪ್ರಭಾವಿ ನಾಯಕರು ಫೋನ್ ಎತ್ತಿಕೊಂಡು ಮಲ್ಲಿಕಾರ್ಜುನ ಖರ್ಗೆಗೆ ಕರೆ ಮಾಡಿ ಬಾವಾಗೆ ಟಿಕೆಟ್‌ ಕೊಡಿ, ಗೆಲ್ಲುವ ಅವಕಾಶ ಜಾಸ್ತಿ ಇದೆ ಎಂದು ಬ್ಯಾಟ್‌ ಬೀಸಿದ್ದರು. ಆದರೆ ಆತ ಯಾರೆಂದು ಗೊತ್ತಾಗಿಲ್ಲ. ‘ನಮ್ಮ ಪಕ್ಷದ ಟಿಕೆಟ್‌ ಯಾರಿಗೆ ಕೊಡಬೇಕು, ಕೊಡಬಾರದು ? ಎನ್ನುವುದನ್ನು ನಾವು ನಿರ್ಧಾರ ಮಾಡುತ್ತೇವೆ. ಇವನ್ಯಾರು ಕರೆ ಮಾಡಿ ಇನ್ಫ್ಲುಯೆನ್ಸ್ ಮಾಡಲು. ಯಾರೋ ಲಾಬಿ ಮಾಡುವುದು ಅಂದ್ರೆ ಏನರ್ಥ ?’ ಎಂದು ಸಿಟ್ಟಾದ ಖರ್ಗೆ ಬಾವಾಗೆ ಯಾವುದೇ ಕಾರಣಕ್ಕೂ ಈ ಬಾರಿ ಟಿಕೆಟ್‌ ಕೊಡಲೇಬಾರದು ಎಂದು ಹಠಕ್ಕೆ ಬಿದ್ದಿದ್ದರು. ಬಾವಾ ಕನಸು ಭಗ್ನ ಆಗಿತ್ತು. ಇನಾಯತ್ ಅಲಿಯ (Inayat Ali) ಅದೃಷ್ಟ ಕೈ ಹಿಡಿದಿತ್ತು.

ಕೊನೆಗೆ ಮಲ್ಲಿಕಾರ್ಜುನ ಖರ್ಗೆ ಹಠಕ್ಕೆ ಬಿದ್ದ ಪರಿಣಾಮ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಡಿಕೆ ಬಣದ ಇನಾಯತ್ ಅಲಿಗೆ ಸಿಕ್ಕಿದೆ. ಟಿಕೆಟ್ ಎಲ್ಲಿ ಮಿಸ್ ಆಗತ್ತೋ ಎಂಬ ಟೆನ್ಶನ್ ನಲ್ಲಿ ಲಾಬಿ ಮಾಡಿಸಲು ಇಳಿದ ಮೊಯಿದ್ದಿನ್ ಬಾವಾ ಒಂದು ಫೋನ್ ಕರೆಯಿಂದ ಟಿಕೆಟ್‌ ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ. ಜತೆಗೆ ಬೇರೆ ಪಕ್ಷಕ್ಕೆ ನೆಗೆಯುವ ಸಾಧ್ಯತೆ ಕೂಡಾ ಪರಿಶೀಲನೆಯಲ್ಲಿದೆ.

ಇದನ್ನೂ ಓದಿ: Mohiuddin Bawa: ರಂಝಾನ್ ಮಾಸದಲ್ಲಿ ಉಪವಾಸ ಹಿಡಿದ ನನ್ನನ್ನು ಸತಾಯಿಸಿ ಹಣ ಬಲಕ್ಕೆ ಟಿಕೆಟ್ ನೀಡಿದರು- ಮೊಯ್ದಿನ್ ಬಾವಾ

 

You may also like

Leave a Comment