Home » ಸಿ.ಟಿ.ರವಿಗೆ ಕೌಂಟರ್ ಹೊಡೆದ ಸಿ.ಎಂ.ಯಡಿಯೂರಪ್ಪ

ಸಿ.ಟಿ.ರವಿಗೆ ಕೌಂಟರ್ ಹೊಡೆದ ಸಿ.ಎಂ.ಯಡಿಯೂರಪ್ಪ

by Praveen Chennavara
0 comments

ರಾಜ್ಯದಲ್ಲಿ ನನಗೆ ಬಿಜೆಪಿಯಲ್ಲಿ ಸಿಕ್ಕಷ್ಟು ಸ್ಥಾನಮಾನ ಹಾಗೂ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಇದರಿಂದ ನನಗೆ ಸಮಾಧಾನ ಇದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ನನಗೆ ತೃಪ್ತಿಯಾಗಿದೆ. ಇದುವರೆಗಿನ ಕಾರ್ಯ ಸಮಾಧಾನ ತಂದಿದೆ. ಮುಂದೆ ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ನಾನು ಸಹ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೇ. ಆದರೆ ನನಗೆ ಪಕ್ಷದಲ್ಲಿ ಎಲ್ಲವೂ ಸಿಕ್ಕಿದೆ.
ರಾಜ್ಯದಲ್ಲಿ ಬಹುಶಃ ನನಗೊಬ್ಬನಿಗೆ ಇಷ್ಟೊಂದು ಸ್ಥಾನಮಾನ ಹಾಗೂ ಅವಕಾಶ ಸಿಕ್ಕಿರುವುದು ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಗೋವಾದಲ್ಲಿ ಸಿ.ಟಿ.ರವಿ ಅವರು ಮಾತನಾಡಿ,ಬಿ.ಎಸ್.ಯಡಿಯೂರಪ್ಪನವರು ಜನಪ್ರಿಯ ನಾಯಕರು. ಬಿಎಸ್ ವೈ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅವರೊಬ್ಬ ಉತ್ತಮ ನಾಯಕ. ಪಕ್ಷ ಅವರಿಗೆ ಸಾಕಷ್ಟು ಅವಕಾಶಗಳನ್ನ ನೀಡಿದೆ ಎಂದು ಹೇಳಿದ್ದರು.

You may also like

Leave a Comment