Home » D.V.Sadananda Gowda: ಬಂಡೆದ್ದ ಡಿವಿಎಸ್‌ ತವರಿನಲ್ಲಿ ದೈವದ ಮೊರೆ; ಮಾಜಿ ಮುಖ್ಯಮಂತ್ರಿಯ ಮುಂದಿನ ನಡೆ ಇಂದು ನಿರ್ಧಾರ?

D.V.Sadananda Gowda: ಬಂಡೆದ್ದ ಡಿವಿಎಸ್‌ ತವರಿನಲ್ಲಿ ದೈವದ ಮೊರೆ; ಮಾಜಿ ಮುಖ್ಯಮಂತ್ರಿಯ ಮುಂದಿನ ನಡೆ ಇಂದು ನಿರ್ಧಾರ?

2 comments
D.V.Sadananda Gowda

Sullia: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ತಮಗೆ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡಿಲ್ಲವೆಂದು ಬಹಳ ನೊಂದುಕೊಂಡು, ಕೆಲವೊಂದು ವಿಚಾರದ ಕುರಿತು ಮಾತನಾಡುವುದಕ್ಕಿದೆ ಎಂದು ಹೇಳಿ ಎರಡು ಮೂರು ದಿನಗಳಿಂದ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿ ಅನಂತರ ಮುಂದೂಡಿಕೆ ಮಾಡಿದ್ದು, ಇದೀಗ ಈ ವಿಷಯ ತಣ್ಣಗಾಗಿರುವ ಲಕ್ಷಣ ಕಂಡು ಬಂದಿದೆ.

ಇದನ್ನೂ ಓದಿ: Illegal Madrasa: ನೋಂದಣಿಯಾಗದೆ ಮಕ್ಕಳ ಶಿಕ್ಷಣ ನೀಡುವ ಮದರಸ ಚರ್ಚ್‌ಗಳಿಗೆ ಇನ್ನು ಮುಂದೆ ಬೀಳುತ್ತೆ ಭಾರೀ ದೊಡ್ಡ ಬೀಗ

ಸುಳ್ಯದ ಮೂಲಮನೆಯಾದ ದೇವರಗುಂಡದಲ್ಲಿ ದೈವ ಕೋಲ ಇರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಸದಾನಂದ ಗೌಡರು ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬಯಸಿ ದೈವಕ್ಕೆ ಮೊರೆ ಇಟ್ಟಿದ್ದಾರೆ. ಸದಾನಂದ ಗೌಡ ಅವರು ಬುಧವಾರ ತಡರಾತ್ರಿ ಸುಳ್ಯದ ಮಂಡೆಕೋಲಿನ ತಮ್ಮ ದೇವರಗುಂಡದ ಮನೆಗೆ ಆಗಮಿಸಿದ್ದು, ಅಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿ ರಾಜಕೀಯ ನಿರ್ಧಾರ ಕೈಗೊಳ್ಳಲು ಆಗಮಿಸಿರುವುದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Bengaluru: ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್‌

ಗುರುವಾರ (ಇಂದು) ಅವರ ರಾಜಕೀಯದ ಮುಂದಿನ ನಡೆಯ ಕುರಿತು ಸ್ಪಷ್ಟ ಮಾಹಿತಿ ಸಿಗುವ ಸಂಭವನೀಯತೆ ಇದೆ.

ಬುಧವಾರ ಬೆಳಗ್ಗೆ ಅವರು ಬೆಂಗಳೂರಿನಿಂದ ತೆರಳಿದ್ದಾರೆ. ದೈವ ಕೋಲ ಮುಗಿಸಿ ಶುಕ್ರವಾರದ ಅನಂತರ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ನಡುವಿನಲ್ಲಿ ಸದಾನಂದ ಗೌಡರನ್ನು ಸಂಘ-ಪರಿವಾರದ ಮುಖಂಡರು ಕರೆಸಿ ಸಮಾಧಾನ ಮಾಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment