Home » Puttur: ಪುತ್ತೂರು: ಬಿಜೆಪಿ‌ ನಾಯಕಿ ‌ಫೋಟೋ ಬಳಸಿ ಅವಹೇಳನಕಾರಿ ಪೋಸ್ಟ್; ದೂರು ದಾಖಲು

Puttur: ಪುತ್ತೂರು: ಬಿಜೆಪಿ‌ ನಾಯಕಿ ‌ಫೋಟೋ ಬಳಸಿ ಅವಹೇಳನಕಾರಿ ಪೋಸ್ಟ್; ದೂರು ದಾಖಲು

0 comments

Puttur: ಪ್ರಧಾನಿ ಮೋದಿ ಉಡುಪಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪುತ್ತೂರು ಬಿಜೆಪಿ ಮುಖಂಡೆ ಆಶಾ ತಿಮ್ಮಪ್ಪ ಗೌಡ ಅವರ ಪೋಟೋ ಬಳಸಿ ಅವಹೇಳನಕಾರಿ ಪೋಸ್ಟ್ ವೈರಲ್ ಮಾಡಿದ ಕುರಿತಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ಕಳೆದ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶಾ ತಿಮ್ಮಪ್ಪ ಗೌಡ ಅವರ ಪೋಟೋವನ್ನು ಬಳಸಿಕೊಂಡು, ಉಡುಪಿಗೆ ಪ್ರಧಾನಿ ಮೋದಿ ಬಂದಿದ್ದ ಸಂದರ್ಭದಲ್ಲಿ ಅವರನ್ನು ನೋಡುವ ಭಾಗ್ಯ ಸಿಗಬಹುದು ಅಂದುಕೊಂಡಿದ್ದೆ. ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ ಎಂದು ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದೀಗ ಈ ರೀತಿಯಾಗಿ ಪೋಸ್ಟರ್ ಸಿದ್ಧಪಡಿಸಿ ವೈರಲ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಕಡಬ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

You may also like