Tiger Claw pendent: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಮೂಲಕ ಆರಂಭವಾದ ಹುಲಿ ಉಗುರಿನ(Tiger Claw) ಪ್ರಕರಣ ಸದ್ಯ, ಸ್ಯಾಂಡಲ್‌ವುಡ್ (sandalwood)ಮತ್ತು ರಾಜಕೀಯ(Politics)ಅಂಗಳಕ್ಕೆ ತಲುಪಿದೆ. ಇದೀಗ, ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದು, ಹುಲಿ ಉಗುರು(Tiger Claw pendent)ಯಾರೇ ಧರಿಸಿದ್ದರೂ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೊದಲು ಕೂಡ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಹಲ್ಲು, ಚರ್ಮ, ಕೊಂಬು ಹಾಗೂ ಇತರೆ ಅಂಗಗಳ ಬಳಕೆ ಮಾಡಿರುವವರನ್ನು ಶಿಕ್ಷೆ ವಿಧಿಸಲಾಗುತ್ತದೆ. ಸ್ಯಾಂಡಲ್ ವುಡ್ ನಟ ದರ್ಶನ್ (Actor Darshan)ಮತ್ತು ವಿನಯ ಗುರೂಜಿ ಅವರು ಸಾರ್ವಜನಿಕವಾಗಿ ಹುಲಿ ಉಗುರು ಧರಿಸಿ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಪ್ರಾಣಿಜನ್ಯ ವಸ್ತುಗಳ ಬಳಕೆ ಸಂಗ್ರಹ, ಸಾಗಾಟ ಮೊದಲಿನಿಂದಲೂ ನಿಷೇಧ ಮಾಡಲಾಗಿದ್ದು, ಈ ಅಪರಾಧ ಮಾಡಿದ ತಪ್ಪಿತಸ್ಥರಿಗೆ ಏಳು ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ದೂರು ನೀಡಿದ್ದಲ್ಲಿ ನೆಲದ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Emotional Mother: ಆಟೋದಲ್ಲಿ ಕೂತು ಕೂಗುವ ತನ್ನ ಕಂದನಿಗಾಗಿ ಐದಾರು ಕಿ.ಮೀ ಓಡಿದ ಹಸು – ಕರುಳಿನ ಸಂಬಂಧ ಕಂಡು ಕಣ್ಣೀರಾದ ಜನ
