Home » Kanakapura Election : ” ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ” – ಕನಕಪುರದಲ್ಲಿ ಡಿಕೆಶಿ ಉದ್ದೇಶಿಸಿ ಸಚಿವ ಆರ್. ಅಶೋಕ್ ಸಿನಿಮಾ ಡೈಲಾಗ್ !

Kanakapura Election : ” ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ” – ಕನಕಪುರದಲ್ಲಿ ಡಿಕೆಶಿ ಉದ್ದೇಶಿಸಿ ಸಚಿವ ಆರ್. ಅಶೋಕ್ ಸಿನಿಮಾ ಡೈಲಾಗ್ !

1 comment
Kanakapura Election

Kanakapura Election : ಕದನ ಕುತೂಹಲ ಸೃಷ್ಟಿಯಾಗಿರುವಂತಹ ಕನಕಪುರದ(Kanakapura Election) ಕರಿಬಂಡೆ ಡಿಕೆಶಿ ಕ್ಷೇತ್ರದಲ್ಲಿ ಆರ್. ಅಶೋಕ್ ರವರು ಸಿನಿಮೀಯ ರೀತಿಯಲ್ಲಿ ಚಾಲೆಂಜ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದಾರೆ.

” ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ” ಎಂದು ಸಚಿವ ಆರ್. ಅಶೋಕ್(R. Ashok film dialogue) ಸಿನಿಮಾ ಡೈಲಾಗ್ ಹೊಡೆದಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ನಡೆದ ಕನಕಪುರ ಬಿಜೆಪಿ ಮುಖಂಡರ ಸಭೆಯಲ್ಲಿ ಸಚಿವ ಆರ್.ಅಶೋಕ ಡಿಕೆ ಶಿವಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದರು. ” ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ” ಸಚಿವ ಆರ್. ಅಶೋಕ್ (. Ashok film dialogue)ಸಿನಿಮಾ ಡೈಲಾಗ್ ಹೊಡೆಯುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದ್ದಾರೆ.

ಇತ್ತೀಚೆಗೆ ಬಿಜೆಪಿಯ ಹೈಕಮಾಂಡ್ ವರುಣದಲ್ಲಿ ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಕಣಕ್ಕೆ ಇಳಿಸಿತ್ತು. ಅಲ್ಲದೆ ಯಾವತ್ತು ಪದ್ಮನಾಭನಗರದಲ್ಲಿ ಸ್ಪರ್ಧಿಸುವ ಆರ್. ಅಶೋಕ್ ಅವರನ್ನು ಪದ್ಮನಾಭನಗರದ ಜೊತೆಗೆ ಕನಕಪುರದಲ್ಲಿಯೂ ಕೂಡ ಇಳಿಸಿ ಡಿಕೆ ಶಿವಕುಮಾರ್ಗೆ ಟಾಂಗ್ ನೀಡಲು ನಿರ್ಧರಿಸಿತ್ತು.

ಹೈಕಮಾಂಡ್ ನ ಅಣತಿಯಂತೆ ಇದೀಗ ಸಿನಿಮಾ ಡೈಲಾಗ್ಸ್ ನೊಂದಿಗೆ ಕನಕಪುರಕ್ಕೆ ಎಂಟ್ರಿ ಆಗಿದ್ದಾರೆ ಸಾಮ್ರಾಟ್ ಅಶೋಕ್ ! ಒಕ್ಕಲಿಗ ನಾಯಕರಿಬ್ಬರ ‘ ನಾನಾ ನೀನಾ ‘ ಯುದ್ಧ ಶುರುವಾಗಿದೆ. ಡಿಕೇಶಿಯ ಭದ್ರ ಕಲ್ಲಿನ ಕೋಟೆಯಲ್ಲಿ ಆರ್ ಅಶೋಕ್ ಮತ್ತು ಸಂಘ ಪರಿವಾರ ಸಂಚಲನ ಸೃಷ್ಟಿಸಿ ಎಷ್ಟರಮಟ್ಟಿಗೆ ಸ್ಪರ್ಧೆ ನೀಡಬಲ್ಲರು ಎಂಬುದನ್ನು ಕಾದು ನೋಡಬೇಕಾಗಿದೆ.

You may also like

Leave a Comment