DK Shivakumar: ಸಿಎಂ ಹುದ್ದೆಗೆ ಪರ್ಯಾಯವಾಗಿ ಬೇರೆ ಹುದ್ದೆಯನ್ನು ನೀಡುವುದಾಗಿ ಡಿಕೆ ಶಿವಕುಮಾರ್ ಮುಂದೆ ಖರ್ಗೆ ಹೇಳಿದ್ದಾರೆ. ಈ ವೇಳೆ ನನಗೆ ಕೊಟ್ಟರೆ ಸಿಎಂ ಕೊಡಿ, ಇಲ್ಲದಿದ್ದರೇ ಬೇರೆ ಹುದ್ದೆ ಬೇಡವೆ ಬೇಡ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಮುಂದೆ ಪಟ್ಟು ಹಾಕಿ ಕೂತಿದ್ದಾರೆ ಎಂದು ಡಿಕೆಶಿ(DK Shivakumar) ಸಡಿಲಿಸದೇ ಹೇಳಿದ್ದಾರೆ ಎನ್ನಲಾಗುತ್ತಿದೆ.
ಈಗ ತಾನೆ ಮಲ್ಲಿಕಾರ್ಜುನ ಖರ್ಗೆಯವರ ಜತೆ ಡಿಕೆ ಶಿವಕುಮಾರ್ ಅವರ ಮೀಟಿಂಗ್ ಮುಗಿದಿದೆ. ಒಟ್ಟು 50 ನಿಮಿಷಗಳ ಸುದೀರ್ಘ ಮಾತುಕತೆ ನಡೆದಿದ್ದು, ಸಿಎಂ ಹುದ್ದೆ ಬಿಟ್ಟು, ಪರ್ಯಾಯ ಯಾವುದೇ ಹುದ್ದೆ ನನಗೆ ಬೇಡ. ನಾನು ಕೇವಲ ಶಾಸಕನಾಗಿಯೇ ಮುಂದುವರೆಯುತ್ತೇನೆ. ಕೊಡುವುದಾದರೇ ಸಿಎಂ ಕೊಡಿ. ಇಲ್ಲಾಂದ್ರೆ ಬೇಡ. ಎಂಬುದಾಗಿ ತಮ್ಮ ಬಿಗಿ ಪಟ್ಟು ಖರ್ಗೆ ಮುಂದೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಾನು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಇಚ್ಚಿಸುವುದಿಲ್ಲ. ಒಂದು ವೇಳೆ ನನಗೆ ಕೊಡಲು ಕಷ್ಟ ಅನಿಸಿದರೆ, ನೀವೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ನಿಮಗೆ ನನ್ನ ಪೂರ್ಣ ಬೆಂಬಲವಿದೆ ಎನ್ನುವ ತಂತ್ರಗಾರಿಕೆ ಮಾತುಗಳನ್ನು ಕೂಡ ಡಿಕೆ ಶಿವಕುಮಾರ್ ಅವರು ಖರ್ಗೆಯವರಿಗೆ ಆಡಿದ್ದಾರೆ. ಇದಕ್ಕೆ ಖರ್ಗೆಯವರು, ನೀವು ಹೇಳಿದ ಎಲ್ಲಾ ಅಂಶಗಳನ್ನು ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮುಂದಿಡುತ್ತೇನೆ ಎಂದಿದ್ದಾರೆ. ನೀವೇ ಸಿಎಂ ಆಗಿ ಎನ್ನುವ ಮೂಲಕ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರನ್ನು ನಾನು ಮುಖ್ಯಮಂತ್ರಿ ಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಟ್ರಾಂಗ್ ಮೆಸೇಜನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮುಂದೆ ತಮ್ಮ ಸಿಎಂ ಹುದ್ದೆ ಬೇಡಿಕೆ ಇಟ್ಟ ಬಳಿಕ ಅಲ್ಲಿಂದ ಡಿಕೆ ಶಿವಕುಮಾರ್ ವಾಪಾಸ್ ತೆರಳಿದ್ದಾರೆ. ಡಿಕೆಶಿ ತೆರಳಿದ ಬೆನ್ನಿಗೆ ಸಿದ್ದರಾಮಯ್ಯನವರು ಎಂಟ್ರಿಕೊಟ್ಟಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಸಿದ್ದು ಅವರ ಪ್ರತ್ಯೇಕ ಮಾತುಕತೆ ಶುರುವಾಗಿದೆ. ಸಿದ್ದು ಅವರ ವಾದ ಏನಿರುತ್ತೆ ? ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯನವರು ಮನವೊಲಿಸಿ, ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆ ನೀಡಲು ಮನ ಒಲಿಸಬಲ್ಲರಾ ? ಡಿಕೆಶಿ ಬೇಡಿಕೆ ಬಗ್ಗೆ ಖರ್ಗೆ ಮಣಿಯುತ್ತಾರಾ.? ಎಂಬುದನ್ನು ತಿಳಿದುಕೊಳ್ಳಲು ಇನ್ನೊಂದು ದಿನ ಕಾಯಬೇಕಾಗುತ್ತದೆ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರನ್ನು ಕೂಡ ಮನವೊಲಿಸಲು ವಿಫಲರಾದರೆ ನಂತರ ಚೆಂಡು ಕೊನೆಯದಾಗಿ ಕಾಂಗ್ರೆಸ್ ಅಧಿನಾಯಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಅಂಗಳಕ್ಕೆ ಹೋಗುತ್ತದೆ. ಅಲ್ಲಿಂದ ಅಂತಿಮ ತೀರ್ಮಾನ ತದನಂತರ ಹೊರಬರಬೇಕಿದೆ.
ಇದೀಗ ಬಂದ ಸುದ್ದಿ:
ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಿದ್ದರಾಮಯ್ಯನವರ ಮೀಟಿಂಗ್ ಅಂತ್ಯಗೊಂಡಿದೆ. ಸಿದ್ದರಾಮಯ್ಯನವರು ಕೂಡ ತಮ್ಮ ಬಿಗ್ ಪಟ್ಟು ಸಡಿಲಸದೆ ಮುಖ್ಯಮಂತ್ರಿ ತನ್ನನ್ನೇ ಮಾಡಬೇಕೆಂದು ಪಟ್ಟಾಗಿ ಕೊಳ್ಳುತ್ತಿದ್ದಾರೆ. ನನಗೆ ಈಗಾಗಲೇ ವಯಸ್ಸಾಗಿದೆ. ನನ್ನಿಂದಾಗಿ ಅಹಿಂದಾದ ಬಹುಪಾಲು ಮತಗಳು ಕಾಂಗ್ರೆಸ್ಸಿಗೆ ಬಂದಿವೆ ಅಲ್ಲದೆ ಹೆಚ್ಚಿನ ಶಾಸಕರುಗಳು ನನ್ನನ್ನು ಬೆಂಬಲಿಸಿದ್ದಾರೆ. ಕನಿಷ್ಠ ಮೊದಲ ಎರಡುವರೆ ವರ್ಷ ಆದರೂ ನನ್ನನ್ನು ಸಿಎಂ ಮಾಡಿ. ತಮಗೆ ಫಿಫ್ಟಿ ಫಿಫ್ಟಿ ಮಾದರಿಗೆ ತಮ್ಮ ಸಹಮತ ಇದೆ. ಆದರೆ ಮೊದಲಾರ್ಧ ಭಾಗಕ್ಕೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವುದು ಸಿದ್ದರಾಮಯ್ಯನವರ ಖಡಕ್ ನುಡಿ.
ಇದನ್ನು ಓದಿ: D.K. Shivakumar: ‘ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುವವರ ಮೇಲೆ ಮಾನನಷ್ಟ ಮೊಕದ್ದಮೆ’ ಡಿಕೆಶಿ ಎಚ್ಚರಿಕೆ !
