DK Shivakumar: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly electionindian) ಮತದಾನ ಮುಗಿದಿದ್ದು, ಇನ್ನು ಎಣಿಕೆ ಮಾತ್ರ ಬಾಕಿ ಇದೆ. ಮೇ 13 ಅಂದರೆ ಶನಿವಾರ ಕೂಡ ಆ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕ ರಾಜಕಾರಣಿಗಳ ಭವಿಷ್ಯ ಹೊರಬೀಳಲಿದೆ. ಆದರೀಗ ಸದ್ಯ ಕಳೆದ ಮೂರು ನಾಲ್ಕು ತಿಂಗಳಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರಾಜಕೀಯ ನಾಯಕರು ಫಲಿತಾಂಶದ ಚಿಂತೆಯ ನಡುವೆಯೇ ಸದ್ಯ ರಿಲ್ಯಾಕ್ಸ್ ಮೂಡಿಗೆ(Relax mood) ಜಾರಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್(DK Shivakumar) ತಮ್ಮ ಗಡ್ಡ(Beard)ಕ್ಕೆ ಕತ್ತರಿ ಹಾಕಿದ್ದು, ಈ ವಿಚಾರ ಸದ್ಯ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಹೌದು, ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವ ಮೊದಲೇ ಇದೀಗ ಡಿಕೆಶಿ ಗಡ್ಡದ ವಿಚಾರ ಮುನ್ನಲೆಗೆ ಬಂದಿದೆ. ಚುನಾವಣಾ ಸಮಯದಲ್ಲಿ ಡಿ.ಕೆ ಶಿವಕುಮಾರ್ ಗಡ್ಡ ಕೂಡ ಇಂಟ್ರಸ್ಟಿಂಗ್ ವಿಚಾರ ಎನಿಸಿತ್ತು. ಈ ವಿಚಾರದ ಬಗ್ಗೆ ಚರ್ಚೆ ಕೂಡ ನಡೆದಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಪಕ್ಷವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿ ಡಿ.ಕೆ ಶಿವಕುಮಾರ್ ಗಡ್ಡ ಬಿಟ್ಟಿದ್ದಾರೆ ಎನ್ನುವ ವಿಚಾರವೂ ಹರಿದಾಡಿತ್ತು. ಆದರೀಗ ರಿಸಲ್ಟ್ ಮುಂಚಿತವಾಗೇ ಡಿಕೆಶಿ ಗಡ್ಡಕ್ಕೆ ಕತ್ತರಿ ಬಿದ್ದಿದೆ. ಹಾಗಿದ್ರೆ ಆ ಶಪಥ ಈಡೇರಿತೇ? ಈಡೇರುತ್ತದೆಯೇ? ಈಡೇರುತ್ತೆ ಎಂದು ಸುಳಿವು ಸಿಕ್ಕಿತೇ? ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ.
ಗಡ್ಡದ ವಿಚಾರವಾಗಿ ಶಪಥ ಎನ್ನುವ ಪ್ರಶ್ನೆ ಉದ್ಧವಿಸಲು ಕಾರಣ ಶಿವಕುಮಾರ್ ಅವರ ತಮ್ಮ ಡಿ ಕೆ ಸುರೇಶ್(DK Suresh) ಕಾರಣ. ಹೌದು, ಡಿ ಕೆ ಸುರೇಶ್ ಅವರು, ಕನಕಪುರ(Kanakapura)ದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು, ಕೆಪಿಸಿಸಿ(KPCC) ಅಧ್ಯಕ್ಷರು ಯಾಕೆ ಗಡ್ಡ ಬಿಟ್ಟಿದ್ದಾರೆ ಗೊತ್ತಾ? ಉತ್ತರ ಕೊಡಬೇಕಾದವರು ಈ ತಾಲೂಕಿನ ಜನ. ಗಡ್ಡ ಯಾಕೆ ಬಿಟ್ಟಿದ್ದಾರೆ ಎನ್ನುವುದು ಮೇ 13ರ ಬಳಿಕ ಗೊತ್ತಾಲಿಗೆ ಎಂದಿದ್ದರು. ಆದರೆ ಇದೀಗ ಮತದಾನ ಮುಗಿಯುತ್ತಿದ್ದಂತೆ ಚುನಾವಣಾ ಫಲಿತಾಂಶಕ್ಕೂ ಮೊದಲು ಡಿ.ಕೆ ಶಿವಕುಮಾರ್ ಗಡ್ಡವನ್ನು ಟ್ರಿಮ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಇನ್ನು ಮೇ 10 ಸಂಜೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿದ್ದು, ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚಿನ ಒಲವು ಹೊಂದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈಗಾಗಲೇ ನಡೆದ ಎಲ್ಲಾ ಸಮೀಕ್ಷೆಗಳಲ್ಲಿ ಹೆಚ್ಚಿನ ಸಮೀಕ್ಷೆಗಳು ಕಾಂಗ್ರೆಸ್ ಸಂಪೂರ್ಣ ಬಹುಮತ ಬರುವುದಾಗಿ ತಿಳಿಸಿದ್ದು, ಕಾಂಗ್ರೆಸ್ ಕಡೆಗೇ ಹೆಚ್ಚಿನ ಒಲವು ತೋರಿವೆ. ಈ ನಿಟ್ಟಿನಲ್ಲಿ ಡಿಕೆಶಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅನ್ನೋ ಆಸೆಯಲ್ಲಿ ತಮ್ಮ ಶಪಥ ಈಡೇರುತ್ತದೆ ಎಂಬ ಸಂಪೂರ್ಣ ನಂಬಿಕೆಯಿಂದ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಸಿದ್ದಾರೇನೋ?
ಒಂದು ವೇಳೆ ಡಿಕೆಶಿ ಅವರು ಸಮೀಕ್ಷೆಗಳನ್ನು ನಂಬಿ ತುಂಬಾ ಉತ್ಸಾಹದಲ್ಲಿದ್ದರೆ ಕಷ್ಟ ಆಗಬಹುದು. ಯಾಕೆಂದರೆ ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಸಮೀಕ್ಷೆ ಲೆಕ್ಕಾಚಾರ ತಲೆಕೆಳಗಾಗಿವೆ. ತುಂಬಾ ಅಂದ್ರೆ ತುಂಬಾ ಡಿಫ್ರೆಂಟ್ ಬಂದಿವೆ. ಮತದಾರ ಪ್ರಭುಗಳ ನಿರ್ಧಾರ ಹೇಗೆಂದು ಹೇಳಲು ಬರುವುದಿಲ್ಲ. ಇದರೊಂದಿಗೆ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಕೂಡ ಹೆಚ್ಚಿದೆ ಎನ್ನುವುದು ಕೂಡ ಸಮೀಕ್ಷೆಯಿಂದ ತಿಳಿದು ಬಂದಿದೆ. ಹಾಗಾಗಿ ಚುನಾವಣಾ ಫಲಿತಾಂಶ ಬರುವವರೆಗೂ ಕಾದು ನೋಡುವುದು ಒಳಿತು.
