DK Suresh- MB Patil:ಮೊನ್ನೆ ಮೊನ್ನೆ ತಾನೆ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಎಂ ಬಿ ಪಾಟೀಲ್(M B Patil) ಅವರು ಮುಂದಿನ 5 ವರ್ಷವೂ ಕೂಡ ಸಿದ್ದರಾಮಯ್ಯ(Siddaramaiah) ಅವರೇ ಸಿಎಂ ಆಗಿರುತ್ತಾರೆ ಎಂಬ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಗೊಂದಲದೊಂದಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಂಸದ ಡಿಕೆ ಸುರೇಶ್ (DK Suresh- MB Patil) ಆಕ್ರೋಶ ವ್ಯಕ್ತಪಡಿಸಿದ್ದು, ಪಾಟೀಲ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಹೌದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈಗ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅವರು ಪೂರ್ಣಾವಧಿ ಸಿಎಂ ಆಗಿರಲಿದ್ದು, ಅಧಿಕಾರ ಹಂಚಿಕೆ ಇಲ್ಲ ಎಂಬ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿಕೆಯು ಆ ಪಕ್ಷದೊಳಗೆ ಸಂಘರ್ಷಕ್ಕೆ ಕಾರಣವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮುನಿಸಿಕೊಂಡಿದ್ದರೆ, ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ (DK Suresh) ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. “ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ ಆದರೆ ಬೇಡ” ಎಂದು ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು,ನಾನು ಎಂಬಿ ಪಾಟೀಲ್ ಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ. ಅವರ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲರನ್ನೇ (Surjewala) ಕೇಳಿ. ಎಂಬಿ ಪಾಟೀಲ್ ಗೆ ಹೇಳಿ ಇದೆಲ್ಲ ಬೇಡ ಅಂತ. ನನಗೂ ಎಂಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಲು ಬರುತ್ತದೆ ಎಂದು ಖಾರವಾಗಿಯೇ ಹೇಳಿದ್ದಾರೆ.
ಅಲ್ಲದೆ ಇನ್ನು ಇದೇ ವಿಚಾರವಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್(Dinesh gunduraou) ವಿಧಾನಸೌಧದಲ್ಲಿ ಮಾತನಾಡಿ, ಎಐಸಿಸಿ ನಾಯಕರು ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಡಿಸಿಎಂ(DCM) ಎಂದು ಹೇಳಿದ್ರು ಅದಷ್ಟು ನಮಗೆ ಗೊತ್ತು. ಈಗ ಅಧಿಕಾರ ಹಂಚಿಕೆ ವಿಚಾರ ಏಕೆ? ಆ ಬಗ್ಗೆ ಏನು ಚರ್ಚೆ ಆಗಿದೆ ಗೊತ್ತಿಲ್ಲ ಎಂದರು.
