Home » DK Suresh: ಕೊನೆಯ ಕ್ಷಣದ ತಂತ್ರಗಾರಿಕೆ : ಕನಕಪುರದಿಂದ ಡಿ.ಕೆ.ಸುರೇಶ್ ನಾಮಪತ್ರ ,ಡಿಕೆಶಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ

DK Suresh: ಕೊನೆಯ ಕ್ಷಣದ ತಂತ್ರಗಾರಿಕೆ : ಕನಕಪುರದಿಂದ ಡಿ.ಕೆ.ಸುರೇಶ್ ನಾಮಪತ್ರ ,ಡಿಕೆಶಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ

by Praveen Chennavara
2 comments
DK Suresh

DK Suresh : ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಎ.20 ಕೊನೆಯ ದಿನ.ಈ ನಡುವೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಕೊನೆಯ ಕ್ಷಣದಲ್ಲಿ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿದೆ.

ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಘೋಷಿಸಲಾಗಿತ್ತು.ಅಲ್ಲದೆ ಅವರು ಎ.17ರಂದು ನಾಮಪತ್ರ ಸಲ್ಲಿಸಿದ್ದರು.ಇದೀಗ ಕಡೇಗಳಿಗೆಯಲ್ಲಿ ಡಿ.ಕೆ ಸುರೇಶ್ ( DK Suresh) ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಎ.17 ರಂದು ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಇಲ್ಲಿ ಬಿಜೆಪಿಯಿಂದ ಆರ್.ಅಶೋಕ್ ಅವರು ಕಣದಲ್ಲಿದ್ದಾರೆ.

ಇದನ್ನೂ ಓದಿ: Karnataka Election-2023 :ಅಂತ್ಯವಾಯ್ತು ನಾಮಿನೇಷನ್ ಪರ್ವ! ಕಣದಲ್ಲಿದ್ದಾರೆ ಬರೋಬ್ಬರಿ 4 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು

You may also like

Leave a Comment