Home » Donating property: ಒಕ್ಕಲಿಗ ಸಮುದಾಯಕ್ಕೆ 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ!

Donating property: ಒಕ್ಕಲಿಗ ಸಮುದಾಯಕ್ಕೆ 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ!

by ಹೊಸಕನ್ನಡ
0 comments

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿರುವ ನಡುವೆಯೇ ಕ್ಷೇತ್ರಗಳಲ್ಲೂ ಹಾಲಿ ಶಾಸಕರು, ಭಾವಿ ಶಾಸಕನಾಗುತ್ತೇನೆಂದು ಕನಸು ಕಾಣುತ್ತಿರುವವರೆಲ್ಲ ಈಗಿನಿಂದಲೇ ತಮ್ಮ ಗೆಲುವಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ (Sharath Bache Gowda) ಮಾಸ್ಟರ್ ಪ್ಲಾನ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

ಹೌದು, ಚುನಾವಣೆಯ ಪೂರ್ವದಲ್ಲಿಯೇ ಮುಂದೆ ಗೆಲ್ಲಲು ಬೇಕಾಗುವ ಎಲ್ಲಾ ತಯಾರಿಗಳನ್ನು ಮಾಡುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಒಕ್ಕಲಿಗ ಸಮುದಾಯಕ್ಕೆ 6 ಕೋಟಿ ಮೌಲ್ಯದ ಜಮೀನು ಬರೆದು ಕೊಟ್ಟಿದ್ದಾರೆ.

ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತಿ‌ ಹೆಚ್ಚು ಮತಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಮತ ಸೆಳೆಯಲು ಯೋಜನೆ ಹಾಕಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು 6 ಕೋಟಿ ಮೌಲ್ಯದ ಜಮೀನು ಗಿಫ್ಟ್​ ಮಾಡಿದ್ದಾರೆ. ಹೊಸಕೋಟೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ್ದಾರೆ. ಒಕ್ಕಲಿಗ ಸಮುದಾಯವು ಕ್ಷೇತ್ರದಲ್ಲಿ 45 ಸಾವಿರ ಮತಗಳನ್ನ ಹೊಂದಿದ್ದು, ಹೀಗಾಗಿ ಮತಗಳನ್ನ ಗಟ್ಟಿ ಮಾಡಿಕೊಳ್ಳಲು ಜಮೀನು ಗಿಫ್ಟ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶಾಸಕ ಶರತ್ ಭರವಸೆ ನೀಡಿದ್ದರು. ಇದೀಗ ನುಡಿದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯ ಸಂಘದ ಹೆಸರಿಗೆ ಬರೆದು ಕೊಟ್ಟಿದ್ದಾರೆ. ತಾನು ನೀಡಿದ ಜಮೀನಿನಲ್ಲಿ ಶಾಲಾ ಕಾಲೇಜು ಕಟ್ಟಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಶಾಸಕರು ಹೇಳಿದ್ದಾರೆ.

You may also like

Leave a Comment