Home » ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು!

ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು!

by Praveen Chennavara
0 comments

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಭೇಟಿ ಸಮಯದಲ್ಲಾದ ಭದ್ರತಾ ಲೋಪ ಅವರನ್ನು ಮುಗಿಸಲು ನಡೆಸಿರುವ ಸಂಚು ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿಯವರನ್ನು ಹತ್ಯೆ ನಡೆಸಲು ಸಂಚು ರೂಪಿಸಿರಬಹುದು ಎಂದು ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಂಜಾಬ್ ನಲ್ಲಿ ನಡೆದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾದರೇ ಹತ್ಯೆಗೆ ಸ್ಕೆಚ್ ಮಾಡಿರುವ ಪಿತೂರಿ ಹೊರಬರುತ್ತದೆ. ಇದು ಕೇವಲ ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಅದರಿಂದಾಚೆಗೂ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರ ಭೇಟಿ ಸಮಯದಲ್ಲಿ ಲೋಪವುಂಟಾಗಿದ್ದು ಆಕಸ್ಮಿಕ ಘಟನೆಯಲ್ಲ, ಇದೊಂದು ಸಂಚು. ಪ್ರಧಾನಿಯನ್ನು ಸಾವಿನ ಬಾವಿಯಲ್ಲಿ ಸಿಲುಕಿಸಿದಂತಾಗಿದ್ದು, ಇದು ಕಾಕತಾಳೀಯವಲ್ಲ, ಭಗವಾನ್ ಶಿವನ ಆಶೀರ್ವಾದದಿಂದ ಅವರು ಬದುಕುಳಿದರು, ಅವರನ್ನು ಡ್ರೋನ್ ಅಥವಾ ಟೆಲಿಸ್ಕೋಪಿಕ್ ಗನ್ ನಿಂದ ಕೊಲ್ಲಲು ಸಂಚು ನಡೆಸಿದ್ದಿರಬಹುದು ಎಂದು ತಿಳಿಯುತ್ತದೆ ಎಂದಿದ್ದಾರೆ.

You may also like

Leave a Comment