Home » ಪ್ರಜಾ ದೇಗುಲವಾಗಿರುವ ವಿಧಾನಸೌಧದಲ್ಲಿ ಕಂಡುಬಂತು ಮದ್ಯದ ಬಾಟಲಿಗಳು | ಅಧಿವೇಶನದ ಈ ಸಮಯದಲ್ಲಿ ಎಣ್ಣೆ ಪಾರ್ಟಿ ನಡೆದದ್ದಾದರೂ ಹೇಗೆ ?!

ಪ್ರಜಾ ದೇಗುಲವಾಗಿರುವ ವಿಧಾನಸೌಧದಲ್ಲಿ ಕಂಡುಬಂತು ಮದ್ಯದ ಬಾಟಲಿಗಳು | ಅಧಿವೇಶನದ ಈ ಸಮಯದಲ್ಲಿ ಎಣ್ಣೆ ಪಾರ್ಟಿ ನಡೆದದ್ದಾದರೂ ಹೇಗೆ ?!

by ಹೊಸಕನ್ನಡ
0 comments

ವಿಧಾನಸೌಧದಲ್ಲಿ ಎಲ್ಲರಿಗೂ ಅಚ್ಚರಿ ಮೂಡುವಂತಹ ಘಟನೆಯೊಂದು ನಡೆದಿದೆ. ವಿಧಾನಸೌಧದ ಎರಡನೇ ಮಹಡಿಯ ರೂಮ್ ನಂಬರ್ 208ರ ಸನಿಹದಲ್ಲಿಯೇ ಮದ್ಯದ ಬಾಟಲಿಗಳು ಕಂಡು ಬಂದಿದ್ದು, ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡೆದಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ.

ಅಧಿವೇಶನದ ಸಮಯದಲ್ಲಿ ಎಂದಿಗಿಂತಲೂ ಹೆಚ್ಚು ಬಿಗಿ ಭದ್ರತೆ ಇರುತ್ತದೆ. ಇದರ ನಡುವೆಯೂ ಬಿಯರ್ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಇದೀಗ ಎಲ್ಲರಲ್ಲಿ ಮೂಡಿದೆ. ರಾತ್ರಿ ಬೆಳಗಾಗುವ ಹೊತ್ತಿಗೆ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿತ್ತು.

ಸದ್ಯ ವಿಧಾನಸೌಧದಲ್ಲಿ ಬಿಯರ್ ಬಾಟಲ್ ಗಳಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವಿಧಾನಸೌಧದ ಸ್ವಚ್ಛತಾ ಸಿಬ್ಬಂದಿಗಳು ಸ್ಥಳದಿಂದ ಬಾಟೆಲ್ ಗಳನ್ನು ಅಲ್ಲಿಂದ ಕ್ಲಿಯರ್ ಮಾಡಿದ್ದಾರೆ.

ಆದರೂ ಪ್ರಜಾ ದೇಗುಲದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ಹಲವರಲ್ಲಿ ಬೇಸರ ತರಿಸಿದೆ. ಅಲ್ಲದೇ ಇದು ವಿಧಾನಸೌಧಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ.

You may also like

Leave a Comment