Home » K J George: ಕೊಪ್ಪಳದ ಅಜ್ಜಿಗೆ ಬಂದ ಲಕ್ಷಗಟ್ಟಲೆ ಕರೆಂಟ್ ಬಿಲ್ ಕುರಿತು ಸ್ಪಷ್ಟೀಕರಣ ಕೊಟ್ಟ ಇಂಧನ ಸಚಿವ ಕೆ. ಜೆ ಜಾರ್ಜ್!! ಸಚಿವರು ಹೇಳಿದ್ದೇನು?

K J George: ಕೊಪ್ಪಳದ ಅಜ್ಜಿಗೆ ಬಂದ ಲಕ್ಷಗಟ್ಟಲೆ ಕರೆಂಟ್ ಬಿಲ್ ಕುರಿತು ಸ್ಪಷ್ಟೀಕರಣ ಕೊಟ್ಟ ಇಂಧನ ಸಚಿವ ಕೆ. ಜೆ ಜಾರ್ಜ್!! ಸಚಿವರು ಹೇಳಿದ್ದೇನು?

by ಹೊಸಕನ್ನಡ
0 comments

K J George: ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್‌ ಬಿಲ್‌(Current bill) ನದ್ದೇ ಚರ್ಚೆ. ವಿದ್ಯುತ್‌ ಬಳಸದಿದ್ದರೂ ಲಕ್ಷ ಲಕ್ಷ ರೂಪಾಯಿ ಬಿಲ್‌ ಬರುತ್ತಿದೆ. ಅಂತಹದ್ದೇ ಘಟನೆ ಇಂದು ಕೊಪ್ಪಳದಲ್ಲಿ(Koppal) ನಡೆದಿದ್ದು, ಎರಡೇ ಎರಡು ಬಲ್ಬ್‌ ಬಳಸುವ 90ರ ಅಜ್ಜಿಯ ಮನೆಗೆ ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್‌ ಬಿಲ್‌ ಬಂದಿದ್ದು, ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಆದರೀಗ ಈ ಬೆನ್ನಲ್ಲೇ ಯಾಕೆ ಹೀಗಾಯಿತು? ಎಂಬುದಕ್ಕೆ ಇಂಧನ ಸಚಿವ ಕೆ. ಜೆ.ಜಾರ್ಜ್(KJ George) ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗುತ್ತಿರೋದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ವಿದ್ಯುತ್​ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ ಎಂದು ಬೆಂಗಳೂರಿನಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್(KJ George) ತಿಳಿಸಿದ್ದಾರೆ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್​ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್​ ಕಲೆಕ್ಟ್​​ ಮಾಡಲು ಹೇಳಿದ್ದಾರೆ.

ಅಲ್ಲದೆ ಏಪ್ರಿಲ್, ಮೇ(April, may)ತಿಂಗಳಿನ ಬಿಲ್​ ಕಲೆಕ್ಟ್​​ ಮಾಡಲು ಹೇಳಿದ್ದಾರೆ. ಹೀಗಾಗಿ ಒಂದೇ ಬಾರಿ ಎರಡು ತಿಂಗಳ ವಿದ್ಯುತ್​ ಏರಿಕೆ ಹಿನ್ನೆಲೆಯಲ್ಲಿ ಬಿಲ್ ಜಾಸ್ತಿ ಬರುತ್ತಿದೆ.​ ನಮ್ಮ ಸಾಫ್ಟ್​​ವೇರ್ ಹಳೆಯದು, ಹೊಸ ಸಾಫ್ಟ್​​ವೇರ್​​​ ಹಾಕಬೇಕು. ಕೆಲವೆಡೆ ಮೀಟರ್​ ಸಮಸ್ಯೆಯಿಂದ ವಿದ್ಯುತ್​ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಮೀಟರ್​ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಅಜ್ಜಿ‌ ಅಷ್ಟೊಂದು ಕರೆಂಟ್​​ ಬಿಲ್​​ ಕಟ್ಟಬೇಕಿಲ್ಲ ಎಂದು ಬೆಂಗಳೂರಿನಲ್ಲಿ(Benglore) ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದರು.

ಅಂದಹಾಗೆ ವಿದ್ಯುತ್​ ದರ ಹೆಚ್ಚಳ ಕಾರಣ ನಾವಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಹಿಂದಿನ ಬಿಜೆಪಿ(BJP) ಸರ್ಕಾರ ಇದ್ದಾಗಲೇ ವಿದ್ಯುತ್​ ದರ ಹೆಚ್ಚಳಕ್ಕೆ ಆದೇಶಿಸಿತ್ತು. ಆದ್ರೆ ಚುನಾವಣೆ ಇದ್ದದ್ದರಿಂದ ಅದನ್ನು ತಡೆಹಿಡಿಯಲಾಗಿತ್ತು ಎನ್ನುವುದು ಕಾಂಗ್ರೆಸ್ ನಾಯಕರ ವಾದ.

ಇನ್ನು ಇದಕ್ಕೆ ಬಿಜೆಪಿ ನಾಯಕರು ಸಹ ಕಾಂಗ್ರೆಸ್(Congress) ನಾಯಕರಿಗೆ ತಿರುಗೇಟು ನೀಡುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಗ್ಯಾರಂಟಿಗಳನ್ನು ಜಾರಿಗೆ ಮಾಡಲು ಹಣ ಕ್ರೂಢೀಕರಣಕ್ಕೆ ಕಾಂಗ್ರೆಸ್​ ದರ ಹೆಚ್ಚಳ ಮಾಡಿದೆ ಎನ್ನುತ್ತಿದ್ದಾರೆ. ಅಲ್ಲದೇ ನಮ್ಮ ಸರ್ಕಾರ ಅವಧಿಯಲ್ಲಿನ ಎಲ್ಲಾ ಅನುದಾನ ತಡೆಹಿಡಿದಂತೆ ಈ ವಿದ್ಯುತ್ ದರ ಏರಿಕೆ ಆದೇಶವನ್ನು ತಡೆಹಿಡಿಯಬಹುದಿತ್ತು ಅಲ್ವಾ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

 

ಇದನ್ನು ಓದಿ: Mumbai: ಅಮುಲ್ ಬಾಲಕಿಯ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ! 

You may also like

Leave a Comment