Home » Varthur Santhosh: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಸನ್ಮಾನ ಮಾಡಿದ್ದ ಎಸ್‌ಐ ರಾತ್ರೋರಾತ್ರಿ ಎತ್ತಂಗಡಿ

Varthur Santhosh: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಸನ್ಮಾನ ಮಾಡಿದ್ದ ಎಸ್‌ಐ ರಾತ್ರೋರಾತ್ರಿ ಎತ್ತಂಗಡಿ

1 comment
Varthur Santhosh

Varthur Santhosh: ಇತ್ತೀಚೆಗೆ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ವರ್ತೂರು ಸಂತೋಷ್‌ ಅವರ ಹವಾ ಸ್ವಲ್ಪ ಹೆಚ್ಚೇ ಆಗಿದೆ ಎನ್ನಬಹುದು. ತನ್ನ ನೇರ ಮಾತಿನಿಂದ ಎಲ್ಲರನ್ನು ಸೆಳೆಯುತ್ತಿರುವ ಹಳ್ಳಿಕಾರ್‌ ಒಡೆಯನನ್ನು ಸನ್ಮಾನ ಮಾಡಲು ಬಂದಿದ್ದ ಸಬ್‌ಇನ್ಸ್‌ಪೆಕ್ಟರ್‌ ಅವರನ್ನು ಇದೀಗ ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Udupi Ram Mandir Gift: ಅಯೋಧ್ಯೆ ಬಾಲರಾಮನಿಗೆ ಕೋಟ ಕಾಶಿಮಠ ಸಂಸ್ಥಾನದಿಂದ ʼಸುವರ್ಣ ಅಟ್ಟೆ ಪ್ರಭಾವಳಿʼ ಕೊಡುಗೆ

ವರ್ತೂರು ಠಾಣೆ ಎಸ್‌ಐ ಆಗಿದ್ದ ತಿಮ್ಮರಾಯಪ್ಪ ಅವರನ್ನು ಪೊಲೀಸ್‌ ಆಯುಕ್ತರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರ. ಎಸ್‌ಐ ಅವರನ್ನು ವರ್ತೂರು ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

 

ನಿನ್ನೆಯಷ್ಟೇ ಇವರು ವರ್ತೂರು ಸಂತೋಷ್‌ ಇದ್ದ ಜಾಗಕ್ಕೆ ಹೋಗಿ ಸನ್ಮಾನ ಮಾಡಿದ್ದರು. ಅಲ್ಲದೇ ಇವರು ಈ ಸಂದರ್ಭದಲ್ಲಿ ಸಮವಸ್ತ್ರ ಧರಿಸಿದ್ದು, ಇವರ ಜೊತೆಗೆ ಕೆಲ ಕ್ರೈಂ ಸಿಬ್ಬಂದಿಗಳು ಕೂಡಾ ಸನ್ಮಾನದ ವೇಳೆ ಹಾಜರಿದ್ದರು. ನಿನ್ನೆಯಷ್ಟೇ ಇವರು ಅಲ್ಲಿಗೆ ಹೋಗಿ ಅಭಿನಂದನೆ ತಿಳಿಸಿದ್ದು, ಇದರ ಬೆನ್ನಲ್ಲೇ ಎಸ್‌ಪಿ ಅವರನ್ನು ವರ್ಗಾವನೆ ಮಾಡಿರುವುದು ನಿಜಕ್ಕೂ ಅಚ್ಚರಿಯ ವಿಷಯ.

 

ಜೈಲಿಗೆ ಹೋಗಿ ಬಂದ ಆರೋಪಿಗೆ ಸಮವಸ್ತ್ರದಲ್ಲಿ ಅವರಿದ್ದ ಸ್ಥಳಕ್ಕೆ ಹೋಗಿ ಸನ್ಮಾನ ಮಾಡುವ ಅಗತ್ಯ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದರು. ಈ ವಿಷಯ ಗೊತ್ತಿದ್ದರೂ ಪೊಲೀಸರು ಯೂನಿಫಾರ್ಮ್‌ ನಲ್ಲಿಯೇ ಸನ್ಮಾನ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕೇಳಿದ್ದಗಿ ವರದಿಯಾಗಿದೆ.

You may also like

Leave a Comment