Home » ESCOM Online Services: ಇನ್ನು ಹತ್ತು ದಿನ ಎಸ್ಕಾಂ ಆನ್ಲೈನ್ ಸೇವೆಗಳು ಬಂದ್

ESCOM Online Services: ಇನ್ನು ಹತ್ತು ದಿನ ಎಸ್ಕಾಂ ಆನ್ಲೈನ್ ಸೇವೆಗಳು ಬಂದ್

1,159 comments
HESCOM Online Services

Escom Online Services: ಇದೀಗ ಇಂಧನ ಇಲಾಖೆಯ ಎಲ್ಲಾ ಎಸ್ಕಾಂಗಳಿಗೂ ಸೇರಿ ಒಂದೇ ಕಡೆ ಎಲ್ಲಾ ಆನ್‌ಲೈನ್ ಸೇವೆಗಳನ್ನು ಕಲ್ಪಿಸುವ ಸಲುವಾಗಿ ಮಾ.10 ರಿಂದ 19 ರವರೆಗೆ ಒಟ್ಟು ಹತ್ತು ದಿನಗಳ ಕಾಲ ರಾಜ್ಯದಲ್ಲಿನ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ: Political News: ಅವರು ಮಾಡಿದ ಕರ್ಮ ಅವರನ್ನು ಬೆನ್ನು ಬಿಡದೆ ಕಾಡುತ್ತದೆ : ಶೋಭಾ ಕರಂದ್ಲಾಜೆ ಗೆ ಟಾಂಗ್ ನೀಡಿದ ಸಿ ಟಿ ರವಿ

ಹೀಗಾಗಿ ನಿನ್ನೆಯಿಂದಲೇ (ಭಾನುವಾರ) ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ.

ಆನ್‌ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆಯೇ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ ಎಂದು ಇಂಧನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತಂತ್ರಾಂಶ ಈಗ ಆರಂಭದಲ್ಲಿಯೇ ಕಾರ್ಯನಿರ್ವಹಿಸುವ ಸಂಭವನೀಯತೆ ಕಡಿಮೆಯಿದ್ದು ಇದು ಇನ್ನು ಸರಿಹೊಂದಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ಎಸ್ಕಾಂ ತಿಳಿಸಿದೆ.

ಆದರೆ ಸಾಫ್ಟ್ ವೇರ್‌ ಅಪ್ಡೇಟ್ ಸಂದರ್ಭದಲ್ಲಿ ವಿದ್ಯುತ್ ಪಾವತಿ ಸಾಧ್ಯವಾಗದ ಕಾರಣ, ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.’

You may also like

Leave a Comment