Home » Brijesh Chowta: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಖಾರದ ಚುರುಮುರಿ ಮಾಡಿ ಕೊಟ್ಟ ಮಾಜಿ ಶಾಸಕ ಸಂಜೀವ ಮಠಂದೂರು

Brijesh Chowta: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಖಾರದ ಚುರುಮುರಿ ಮಾಡಿ ಕೊಟ್ಟ ಮಾಜಿ ಶಾಸಕ ಸಂಜೀವ ಮಠಂದೂರು

1 comment
Brijesh Chowta

Brijesh Chowta: ಲೋಕಸಭಾ ಚುನಾವಣಾ ಕ್ಷೇತ್ರದ ಚುನಾವಣಾ ಕಣ ಬಿಸಿಯೇರುತ್ತಿದ್ದು ಚುನಾವಣಾ ಅಂಕಣದಿಂದ ರಂಗು ರಂಗಿನ ಸುದ್ದಿಗಳು ಹೊರಬರಲು ತಯಾರಾಗುತ್ತಿವೆ. ಇದೀಗ ಮಾಜಿ ಶಾಸಕರೊಬ್ಬರು ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಚುರುಮುರಿ ಕಲಸಿ ಕೊಟ್ಟ ಘಟನೆ ನಡೆದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಂದರ್ಭ ಜಾತ್ರೆಯೊಂದಕ್ಕೆ ತೆರಳಿದ ಬ್ರಿಜೇಶ್ ಚೌಟರಿಗೆ ಸಂತೆಯಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಚರುಮುರಿ ಮಾಡಿ ಕೊಟ್ಟ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ವಾರಾಣಸಿಯಲ್ಲಿ ಮೋದಿ ವಿರುದ್ಧ ಎರಡು ಬಾರಿ ಸೋತ ಅಜಯ್ ರಾಯ್ ನೇ ಈ ಬಾರಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ !

ಚುನಾವಣಾ ಪ್ರಚಾರದ ಬಿಡುವಿನ ವೇಳೆ ದಾರಿ ಮಧ್ಯೆ ಅಲ್ಲಿನ ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶಕ್ಕೆ ತೆರಳಿದ ಕ್ಯಾಪ್ಟನ್‌ ಬ್ರಿಜೇಶ್ ಚೌಟರಿಗೆ ದೇವಳದ ದರ್ಶನ ಪಡೆದ ನಂತರ ಜಾತ್ರಾ ಸಂತೆಯಲ್ಲಿ ತಿರುಗಾಡಿದರು. ಆಗ ಮಾಜಿ ಶಾಸಕರು ತಾವೇ ಖುದ್ದಾಗಿ ಚರ್ಮುರಿ ಮಾಡಿ ಕೊಟ್ಟಿದ್ದಾರೆ.
ಅಲ್ಲಿ ಚರ್ಮುರಿ ಮಾಡುತ್ತಿದ್ದ ಮಹಿಳೆಯ ಕೈಯಿಂದ ಪಾತ್ರೆ ಸೌಟು ಎತ್ತಿಕೊಂಡು ತಾವೇ ಖುದ್ದಾಗಿ ಚರ್ಮೂರಿ ಮಿಕ್ಸ್ ಮಾಡಿ ಖಾರದ ಮಿಕ್ಸರ್ ಹೊಡೆದು ಅವರು ತಯಾರಿಸಿದ ಚರ್ಮುರಿ ವಿಡಿಯೋ ಈಗ ವೈರಲ್ ಆಗಿದೆ.

 

You may also like

Leave a Comment