Free Bus New rules: ಕರ್ನಾಟಕ ರಾಜ್ಯದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯಾದ ಶಕ್ತಿ ಯೋಜನೆಯ ಫ್ರೀ ಬಸ್ಸುಗಳ ಹೋರಾಟ ಪ್ರಾರಂಭವಾದ ದಿನದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗಿವೆ. ಬಹುಶಹ ಮಹಿಳೆಯರಲ್ಲಿ ಈ ಯೋಜನೆ ಕಾಲಿಕವಾಗಿ ಇರಲಿಕ್ಕಿಲ್ಲ ಇದ್ದಷ್ಟು ದಿನ ಇದರ ಲಾಭವನ್ನು ಪಡೆದುಕೊಳ್ಳೋಣ ಎನ್ನುವ ಆಲೋಚನೆ ಇರಬಹುದು: ಅದಕ್ಕಾಗೇ ಉಚಿತ ಬಸ್ಸುಗಳಲ್ಲಿ ಪ್ರಯಾಣಿಸಲು ಮಹಿಳೆಯರು ನೂಕುನುಗ್ಗಲು ಉಂಟು ಮಾಡುತ್ತಿದ್ದಾರೆ.
ಎಲ್ಲೆಡೆ ತಳ್ಳಾಟ, ನೂಕಾಟ ನಡೆದೇ ಇದೆ. ದೊಡ್ಡ ಸಂಖ್ಯೆಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವ ಮಹಿಳೆಯರ ದೃಶ್ಯ ಸಾಮಾನ್ಯ. ಈಗಾಗಲೇ ಫ್ರೀ ಬಸ್ಸು ಶುರುವಾದ ಜೂನ್ 11ನೇ ಮಧ್ಯಾಹ್ನದಿಂದ ಇಲ್ಲಿಯ ತನಕ ಮೂರು ಕೋಟಿಗೂ ಹೆಚ್ಚು ಮಹಿಳೆಯರು ಈ ಉಚಿತ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಜಡೆ ಜಗಳ ಸಹ ನಡೆದಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ.
ಎಲ್ಲಾ ಸಂದರ್ಭಗಳನ್ನು ಮಹಿಳೆಯರು ಅವಸರ ತೋರಿಸುತ್ತಿದ್ದಾರೆ. ರಾಶಿ ಇರುವ ಕಾರಣ ಸೀಟು ಪಡೆಯಲು ಕಿಟಕಿಯ ಮೂಲಕ ಮಕ್ಕಳನ್ನು ಒಳಕ್ಕೆ ತೋರಿಸುವುದು ಡ್ರೈವರ್ ಸೀಟಿನ ಬಾಗಿಲು ತೆಗೆದು ಅಲ್ಲಿಂದ ಬಸ್ಸಿಗೆ ಹತ್ತುವುದು ಮುಂತಾದ ನಡೆ ಮಹಿಳಾ ಮನಿಗಳಿಂದ ದಿನನಿತ್ಯ ಕೇಳಿ ಬರುತ್ತಿದೆ.
ಈ ಎಲ್ಲಾ ವಿಪರೀತ ರಶ್ ಮತ್ತು ದುಡುಕಿನ ಬೆಳವಣಿಗೆಯನ್ನು ಗಮನಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉಚಿತ ಪ್ರಯಾಣಕ್ಕೆ ಕೆಲವು ಮಾರ್ಗಸೂಚಿ ಪ್ರಕಟಿಸುವ ಸುಳಿವನ್ನು ಈಗ ನೀಡಿದ್ದಾರೆ. ಸುದ್ದಿವಾಹಿನಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಉಚಿತ ಯೋಜನೆಯನ್ನು ನಾವು ಇನ್ನಷ್ಟು (Free Bus New rules) ಶಿಸ್ತುಬದ್ಧವಾಗಿ ತರಬೇಕಿದೆ. ಮುಂದೆ ಐದು ವರ್ಷಗಳ ಕಾಲ ಯೋಜನೆ ಜಾರಿಯಲ್ಲಿರಬೇಕಿದೆ. ಅದಕ್ಕಾಗಿ ಸೂಕ್ತ ಮಾರ್ಗಸೂಚಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಹೊಸ ಮಾರ್ಗ ಸೂಚಿ ಜಾರಿಗೆ ಬರಲಿದ್ದು ಅದು ಏನಿರಬಹುದು ಅದು ಯಾವ ರೀತಿ ನುಗ್ಗಿ ಬರುವ ಮಹಿಳೆಯರನ್ನು ನಿಯಂತ್ರಿಸಬಲ್ಲದು ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ಈಗಾಗಲೇ ಕೆಲವು ಸುಳಿವುಗಳು ದೊರೆತಿವೆ.
ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಹೇಳಿದ್ದೇನು ?
1.ಸ್ಟ್ಯಾಂಡಿಂಗ್ ಉಚಿತ ಪ್ರಯಾಣ ನಿರ್ಭಂಧ ಸಾಧ್ಯತೆ: ಫ್ರೀ ಅಂತ ಎಲ್ಲರೂ ಒಂದೇ ದಿನ ಬಸ್ನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲದ ದೂರದ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. . ನಿಂತುಕೊಂಡು ಪ್ರಯಾಣಿಸುವುದರಿಂದ ಹೆಚ್ಚಿನ ಜನರಿಗೆ ಅನಾನುಕೂಲವಾಗುತ್ತಿದೆ.
2. ದೂರದೂರಿಗೆ ಬಸ್ ಕಾಡಿರುವಿಕೆ ಕಡ್ಡಾಯ ?: ಮೊದಲೇ ಆಸನ ಕಾಯ್ದಿರಿಸಿದ್ರೆ ಎಲ್ಲರೂ ಆರಾಮವಾಗಿ ಪ್ರಯಾಣಿಸಬಹುದು ಎಂದಿದ್ದಾರೆ. ಸಾರಿಗೆ ಸಚಿವರ ಈ ಹೇಳಿಕೆಯ ಆಧಾರದ ಮೇಲೆ ದೂರದೂರಿಗೆ ಉಚಿತ ಪ್ರಯಾಣ ಕೇವಲ ಕಾದಿರಿಸುವಿಕೆ ಮೂಲಕ ಮಾತ್ರ ಸಾಧ್ಯವೇ ? ಎಂಬ ಅನುಮಾನ ಉಂಟಾಗಿದೆ.
3.ದಿನ ಬಿಟ್ಟು ದಿನ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣವೇ?: ಒಂದು ವಾರ ಒಬ್ಬರು, ಮತ್ತೊಂದು ವಾರ ಅವರು ಹೋಗಲಿ. ಹೀಗೆ ಮಾಡಿದ್ರೆ ಪುರುಷ ಪ್ರಯಾಣಿಕರಿಗೂ ಸೀಟ್ ಸಿಗಲಿದೆ. ಒಂದು ಯೋಜನೆಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು ಎಂದ ಸಚಿವರು. ಅಂದ್ರೆ ದಿನ ಬಿಟ್ಟು ದಿನ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣವೇ? ಎಂಬ ಅನುಮಾನ ಉಂಟಾಗಿದೆ.
4.ವೀಕೆಂಡ್ ಪ್ರಯಾಣಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ.
5.ಕಠಿಣ ರೂಲ್ಸ್ ಜಾರಿ ಬರುವ ನಿರೀಕ್ಷೆ : ಯಾವುದೇ ಮಾರ್ಗಸೂಚಿ ಪ್ರಕಟವಾದ್ರೂ ಅದು ಪ್ರಯಾಣಿಕರ ಸುರಕ್ಷತೆಗಾಗಿ, ಎಲ್ಲಾ ಪ್ರಯಾಣ ಮಹಿಳೆಯರಿಗೆ ಉಚಿತವಾಗಿರಲಿದೆ ಎಂದು ಸಚಿವರು ಹೇಳಿದ್ದು ಅದರ ಜತೆಗೇ ಸ್ಟ್ರಿಕ್ಟ್ ರೂಲ್ಸ್ ಜಾರಿ ಆಗೋ ನಿರೀಕ್ಷೆ ಇದೆ. ಹಾಗಾಗಿ ಕಠಿಣ ರೂಲ್ಸ್ ಜಾರಿ ಬರುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಈ ಯೋಜನೆ ತುಂಬ ದಿನ ಇರೋದಿಲ್ಲ. ಯೋಜನೆ ಎಷ್ಟು ದಿನ ಇರುತ್ತೋ ಏನು? ಈಗಲೇ ಈ ಪ್ರಯೋಜನ ಪಡೆದುಕೊಳ್ಳಿ ಎಂದು ಬಿಜೆಪಿಯವರು ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಈ ಯೋಜನೆ ಮುಂದಿನ ಐದು ವರ್ಷವೂ ಇರಲಿದೆ ಎಂದು ಸಚಿವರು ಹೇಳಿದ್ದಾರೆ. ನಿನ್ನೆ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿ ನಾಯಕ ಆರ್ ಅಶೋಕ್ ಅವರು ಮಾತನಾಡಿ, ‘ ಮಹಿಳೆಯರು ಆದಷ್ಟು ಬೇಗ ಇದರ ಲಾಭ ಪಡೆದುಕೊಳ್ಳಿ, ಈ ಯೋಜನೆ ಇನ್ನೆಷ್ಟು ದಿನ ಇರುತ್ತೋ ಇಲ್ವಾ ಗೊತ್ತಿಲ್ಲ’ ಎಂದಿದ್ದರು.
