Gruha Jyoti scheme: ಬೆಂಗಳೂರು: ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕಾಗಿ ಬಳಸೋ ಬಳಕೆದಾರರನ್ನು ಬಿಟ್ಟು, ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್ನೀಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಭಾರೀ ಬಹುಮತದೊಂದಿಗೆ ಗೆದ್ದು ಬೀಗಿದ ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು ಜಾರಿಯಾಗುತ್ತಿದ್ದಂತೆ, ಮಾನದಂಡಗಳಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯಸಂಪುಟ ಸಭೆಯಲ್ಲೂ ‘ಎಲ್ಲರಿಗೂ ಉಚಿತ ವಿದ್ಯುತ್ ನೀಡ್ತೇವೆ’ ಮರುಉಚ್ಚರಿಸಿದ್ದಾರೆ.
ಇದೀಗ ಜನ ಸಾಮಾನ್ಯರಲ್ಲಿ ಬಹುದೊಡ್ಡ ಗೊಂದಲಕ್ಕೆ ಕಾರಣವಾಗಿದ್ದು. ಈ ಬಗ್ಗೆ ಮಾಧ್ಯಮಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯಾದ್ಯಂತ ಬಾಡಿಗೆದಾರರಿಗೆ ಸೇರಿದಂತೆ ಎಲ್ಲರಿಗೂ 200 ಯೂನಿಟ್ ಒಳಗೆ ವಿದ್ಯುತ್ ಉಪಯೋಗಿಸುವವರಿಗೆ ಗೃಹಜ್ಯೋತಿ ಭಾಗ್ಯ ಉಚಿತವಾಗಲಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸುವವರಿಗೆ ಮಾತ್ರ ಅನ್ವಯವಾಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ . ಈ ಬೆನ್ನಲ್ಲೆ ಒಂದೇ ಮಾಲೀಕರ ಹೆಸರಿನಲ್ಲಿ ನಾಲ್ಕಾರು ವಿದ್ಯುತ್ ಮೀಟರುಗಳಿದ್ದರೆ ಯಾರಿಗೆ ಉಚಿತವಾಗುತ್ತೆ ಅನ್ನೋದು ಮತ್ತೊಂದು ಹೊಸ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!
