2
Maternity Leave: (Rajnath Singh)ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸೈನಿಕರು, ನಾವಿಕರು ಮತ್ತು ವಾಯು ಯೋಧರಿಗೆ ಅವರ ಅಧಿಕಾರಿ ಕೌಂಟರ್ಪಾರ್ಟ್ ಗೆ ಸಮಾನವಾಗಿ ಹೆರಿಗೆ, ಮಕ್ಕಳ ಆರೈಕೆ (Maternity Child Care)ಮತ್ತು ಮಕ್ಕಳ ದತ್ತು ರಜೆಗಳ ನಿಯಮಗಳ (Maternity Leave)ವಿಸ್ತರಣೆಯ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದಾರೆ.
ಮಿಲಿಟರಿಯಲ್ಲಿನ ಅಧಿಕಾರಿಯಾಗಿರಲಿ ಇಲ್ಲವೇ ಯಾವುದೇ ಇತರ ಶ್ರೇಣಿಯಲ್ಲಿರಲಿ ಎಲ್ಲಾ ಮಹಿಳೆಯರಿಗೆ ಸಮಾನವಾಗಿ ರಜೆಗಳ ಅನುದಾನ ಸಮಾನವಾಗಿ ಅನ್ವಯವಾಗಲಿದೆ. ಸಶಸ್ತ್ರ ಪಡೆಗಳಲ್ಲಿ ಅವರ ಶ್ರೇಣಿಯನ್ನು ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ. ಕೇಂದ್ರದ ಈ ನಿರ್ಣಯ ಮಿಲಿಟರಿಯಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳನ್ನು ಸುಧಾರಣೆ ಮಾಡುವ ಜೊತೆಗೆ ವೃತ್ತಿಪರ ಮತ್ತು ಕೌಟುಂಬಿಕ ಜೀವನದ ಕ್ಷೇತ್ರಗಳನ್ನು ಉತ್ತಮ ರೀತಿಯಲ್ಲಿ ಸಮತೋಲನಗೊಳಿಸಲು ಸಹಕರಿಸುತ್ತದೆ.
