Gruhalakshmi scheme: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಜಾರಿಯಾಗಿ ಈಗಾಗಲೇ ಮೊದಲನೇ ಕಂತಿನ ಹಣ ಎಲ್ಲ ಮಹಿಳೆಯರ ಖಾತೆಗೆ ಬಂದು ಸೇರಿದೆ. ಇದೀಗ ಎಲ್ಲಾ ಯಜಮಾನಿರು ಗೃಹಲಕ್ಷ್ಮೀಯ ಎರಡನೇ ಕಂತಿನ ಹಣಕ್ಕಾಗಿ ಕಾದು ನಿಂತಿದ್ದಾರೆ. ಈ ಬೆನ್ನಲ್ಲೇ ಸರ್ಕಾರವು 2ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಅಧಿಕೃತ ಮಾಹಿತಿಯನ್ನು ಹೊರಡಿಸಿದ್ದು, ರಾಜ್ಯದ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಹೌದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯಡಿ ಕೊಡಮಾಡುವ 2000 ಹಣವನ್ನು ಮಹಿಳೆಯರು ಪಡೆದು ತುಂಬಾ ಸಂತಸದಿಂದಿದ್ದರು. ಇದೀಗ 2ನೇ ಕಂತಿನ ಹಣ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ಕುರಿತು ಸರ್ಕಾರವು ಬಿಗ್ ಅಪ್ಡೇಟ್ ನೀಡಿದ್ದು, ಅಕ್ಟೋಬರ್ 2 ನೇ ವಾರದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಅಂದಹಾಗೆ ಅಕ್ಟೋಬರ್ 2 ನೇ ವಾರದಲ್ಲಿ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಮೊದಲ ಕಂತು ಖಾತೆಗೆ ಬಾರದಿರುವ ಮಹಿಳೆಯರು ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ಸಮಸ್ಯೆ ಸರಿಪಡಿಸಿಕೊಂಡೆರೆ ಎರಡೂ ಕಂತು ಒಂದೇ ಸಲ ಖಾತೆಗೆ ಜಮಾ ಆಗಲಿದೆ ಎನ್ನಲಾಗಿದೆ.
ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಯೊಜನೆ ಜಾರಿ ಮಾಡಲಾಗಿದೆ. ಇದರಲ್ಲಿ 1.10 ಕೋಟಿ ಜನರಿಗೆ ತಲಾ ರೂ.2000 ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ ಇನ್ನೂ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ತೊಂದರೆಯಿಂದ ಹಣ ಜಮೆ ಆಗಿರುವುದಿಲ್ಲ. ಶೀಘ್ರವೇ 16 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ
