Home » Gruhalakshmi : ಗೃಹಲಕ್ಷ್ಮಿ ದುಡ್ಡು 2,000 ದಿಂದ 4,000ಕ್ಕೆ ಏರಿಕೆ – ಸದನದಲ್ಲಿ ಹೊಸ ಘೋಷಣೆ!!

Gruhalakshmi : ಗೃಹಲಕ್ಷ್ಮಿ ದುಡ್ಡು 2,000 ದಿಂದ 4,000ಕ್ಕೆ ಏರಿಕೆ – ಸದನದಲ್ಲಿ ಹೊಸ ಘೋಷಣೆ!!

0 comments

Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಆದರೆ ಈ ಯೋಜನೆಯ ಅಡಿಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ 2,000 ಬದಲಾಗಿ 4000 ರೂಗಳನ್ನು ನೀಡುವುದಾಗಿ ಸದನದಲ್ಲಿ ಪ್ರಸ್ತಾಪವಾಗಿದೆ.

 

 ರಾಜ್ಯದಲ್ಲಿ ಸದ್ಯ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಬದಲಾಗಿ 4000 ರೂಗಳನ್ನು ನೀಡುವ ಕುರಿತಾಗಿ ಹೊಸ ಘೋಷಣೆಯನ್ನು ಮಾಡಿದ್ದಾರೆ. ಹೌದು, 2028ರಲ್ಲಿ ಬಂದ್ರೆ ಈಗ ಗೃಹ ಲಕ್ಷ್ಮೀ ಯೋಜನೆಯಡಿ ಯಜಮಾನಿ ಮಹಿಳೆಯರಿ ನೀಡಲಾಗುತ್ತಿರುವಂತ 2000 ಹಣವನ್ನು 4000ಕ್ಕೆ ಏರಿಕೆ ಮಾಡುವುದಾಗಿ ಸದನದಲ್ಲೇ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಘೋಷಿಸಿದರು.

 

ಇಂದು ಗೃಹ ಲಕ್ಷ್ಮೀ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯ ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ ಆರಂಭದಲ್ಲಿ ಬಹಳಷ್ಟು ಜನರು 2000 ಬರುತ್ತಾ? ಕೊಡುತ್ತಾ ಈ ಸರ್ಕಾರ ಅಂತ ಟೀಕೆ ಮಾಡಿದ್ರು. ಆದರೇ 2000 ಕೊಟ್ಟಿದ್ದು ಕಣ್ಣಾರೆಯೇ ನೋಡುತ್ತಿದ್ದೇವೆ ಎಂದು ಹೇಳಿದರು. ಯಾರಾದರೂ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ವಿರೋಧ ಮಾಡಿದರೇ ಅವರಿಗೆ ರಾಜ್ಯದ ಯಜಮಾನಿ ಮಹಿಳೆಯರ ಶಾಪ ತಟ್ಟುತ್ತೆ. ಮುಂದಿನ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರವೇ ಬಂದ್ರೇ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದ್ರೆ 2000 ಗೃಹ ಲಕ್ಷ್ಮೀ ಹಣವನ್ನು 4000ಕ್ಕೆ ಏರಿಕೆ ಮಾಡಲು ನಾವು ತಯಾರಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರು ತಿಳಿಸಿದರು.

You may also like