H.D.Kumaraswamy : ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಪ್ರಭಾವಿಗಳಿಗೂ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿರುವ ಯುವರಾಜ್ (yuvaraj) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಧಿಕಾ ಕುಮಾರಸ್ವಾಮಿಯನ್ನು (Radhika Kumaraswamy) ಸಿಸಿಬಿ ವಿಚಾರಣೆ ಮಾಡಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರಿಗೆ ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ ರಾಧಿಕಾ ಬಗ್ಗೆ ಮಾತನಾಡಿದ್ದು, “ತನಗೆ ಆಕೆ ಯಾರೆಂದು ಗೊತ್ತಿಲ್ಲ. ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರು.
ಸಿಸಿಬಿ ವಶದಲ್ಲಿರುವ ವಂಚಕ ಯುವರಾಜ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ. ಈ ಪ್ರಕರಣದಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟಿ ರಾಧಿಕಾ (Radhika) ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್ ಅವರ ಹೆಸರು ಕೇಳಿ ಬಂದಿದೆ. ಹಾಗಾಗಿ ಸಿಸಿಬಿ ರವಿರಾಜ್ ಅವರನ್ನು ವಿಚಾರಣೆ ನಡೆಸುತ್ತಲೇ ಬಂದಿದೆ. ಇದೀಗ ರಾಧಿಕಾ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ. ಈ ಬಗ್ಗೆ ಮಾಜಿ ಎಚ್‌ಡಿ ಕುಮಾರಸ್ವಾಮಿ ಮೌನ ಮುರಿದಿದ್ದಾರೆ.
ಭಾನುವಾರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ (H. D. Kumaraswamy) ಭೇಟಿ ನೀಡಿದರು. ಈ ವೇಳೆ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್‌ಡಿಗೆ ಪ್ರಶ್ನೆ ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಯಾರಪ್ಪ ಅದು, ಅವರು ಯಾರು ಅಂತ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ನನ್ನ ಬಳಿ ಕೇಳಲೇಬೇಡಿ” ಎಂದು ಹೇಳಿ ಹೊರಟರು.
ರಾಧಿಕಾ ಕುಮಾರಸ್ವಾಮಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಕೇವಲ ಕನ್ನಡ ಚಿಂತ್ರರಂಗ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿಯೂ ಕೂಡ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಕೇವಲ 16 ವರ್ಷ ಇರುವಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನೀಲ ಮೇಘ ಶಾಮ ಎಂಬ ಚಿತ್ರದಲ್ಲಿ ಸೃಜನ್ ಲೋಕೆಶ್ ಜೊತೆ ಕಾಣಿಸಿಕೊಳ್ಳುವ ಮೂಲಕ ಸಿನಿ ಜೀವನ ಆರಂಭಿಸಿದ್ದಾರೆ. ನಂತರ 2013 ರಲ್ಲಿ ಸಿನಿ ಜರ್ನಿಯಿಂದ ಅಂತರ ಕಾಯ್ದುಕೊಂಡರು. ಎಚ್ ಡಿ ಕುಮಾರಸ್ವಾಮಿ ಅವರನ್ನು ವಿವಾಹವಾದ ನಂತರ ಸದ್ಯ ಸಿನಿಮಾದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ: ನಟಿ ಉಮಾಶ್ರೀ ವಿರುದ್ಧ FIR ದಾಖಲು!!
