Home » Karnataka BJP: ಮಂಡ್ಯದಲ್ಲಿ ಹನುಮಧ್ವಜ ತೆರವು ಪ್ರಕರಣ- ರಾಜ್ಯ ಬಿಜೆಪಿಯಿಂದ ಮಹತ್ವದ ಘೋಷಣೆ!!

Karnataka BJP: ಮಂಡ್ಯದಲ್ಲಿ ಹನುಮಧ್ವಜ ತೆರವು ಪ್ರಕರಣ- ರಾಜ್ಯ ಬಿಜೆಪಿಯಿಂದ ಮಹತ್ವದ ಘೋಷಣೆ!!

0 comments

Karnataka BJP: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಿನ್ನೆ (ಶನಿವಾರ) ರಾತ್ರಿ ಹನುಮಧ್ವಜ (Hanuma Dhwaja) ಹಾರಿಸಿದ್ದು, ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದ ಪ್ರಕರಣ ಇದೀಗ ತೀವ್ರ ಹೋರಾಟದ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಇದು ಹಲವಾರು ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದರೆ ಮತ್ತೊಂದೆಡೆ ಬಿಜೆಪಿಯು ಇದನ್ನು ಎಲ್ಲಾ ಆಯಾಮಗಳಿಂದಲೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದೀಗ ಈ ಕುರಿತು ರಾಜ್ಯ ಬಿಜೆಪಿಯು(Karnataka BJP) ಮಹತ್ವದ ಘೋಷಣೆಯನ್ನು ಹೊರಡಿಸಿದೆ.

ಹೌದು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಿನ್ನೆ (ಶನಿವಾರ) ರಾತ್ರಿ ಹನುಮಧ್ವಜ (Hanuma Dhwaja)ಇಳಿಸಿದ ಬಗ್ಗೆ ರಾಜ್ಯದ್ಯಾಂತ ಭಾರೀ ಆಕ್ರೋಶ ಕೇಳಿಬರುತ್ತಿದೆ. ಬಿಜೆಪಿ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಒಂದು ಹನುಮಧ್ವಜ ತೆಗೆದರೆ ಹಿಂದುಗಳು ಮನೆಮನೆಯಲ್ಲೂ ಹನುಮಧ್ವಜ ಹಾರಿಸುವಂತೆ ವಿಡಿಯೋ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕರೆ ನೀಡಿದ್ದಾರೆ

https://twitter.com/BJP4Karnataka/status/1751533867167805611?s=19

ಬಿಜೆಪಿ ಪೋಸ್ಟ್ ಅಲ್ಲಿ ಏನಿದೆ?
ಮಂಡ್ಯ ಜಿಲ್ಲೆಯ ಕೆರಗೋಡು ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ನಿರ್ಣಯ ಮಾಡಿ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದಾಗ, ರಾಜ್ಯ ಸರ್ಕಾರವು ಪೊಲೀಸ್ ಬಲದ ಮೂಲಕ ದಬ್ಬಾಳಿಕೆ ಮಾಡಿ ಧ್ವಜ ಇಳಿಸುವ ದುಸ್ಸಾಹಸ ಪ್ರದರ್ಶಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ಹೀಗಾಗಿ ಒಂದು ಹನುಮಧ್ವಜ ತೆಗೆದರೆ ಹಿಂದುಗಳು ಮನೆಮನೆಯಲ್ಲೂ ಹನುಮಧ್ವಜ ಹಾರಿಸುವಂತೆ ಘೋಷಣೆ ಮಾಡಲಾಗಿದೆ. ಇನ್ನು ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಕರೆಕೊಟ್ಟಿರುವ ಮನೆ ಮನೆಯಲ್ಲಿ ಹನುಮಧ್ವಜ ಹಾರಿಸುವ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.

 

You may also like

Leave a Comment