Home » Hyderabad: ಹೈದರಬಾದಲ್ಲಿ ಕರ್ನಾಟಕ ಸಚಿವರ ಹುಚ್ಚಾಟ – ಮದುವೆಯಲ್ಲಿ ಪಾಲ್ಗೊಂಡ ಮಂತ್ರಿಗೆ ದುಡ್ಡಿನಭಿಷೇಕ !! ಕಾಲಮೇಲೆಲ್ಲಾ ಝಣ, ಝಣ ಕಾಂಚಣ !

Hyderabad: ಹೈದರಬಾದಲ್ಲಿ ಕರ್ನಾಟಕ ಸಚಿವರ ಹುಚ್ಚಾಟ – ಮದುವೆಯಲ್ಲಿ ಪಾಲ್ಗೊಂಡ ಮಂತ್ರಿಗೆ ದುಡ್ಡಿನಭಿಷೇಕ !! ಕಾಲಮೇಲೆಲ್ಲಾ ಝಣ, ಝಣ ಕಾಂಚಣ !

0 comments
Hyderabad

Hyderabad: ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾದ ಜನಾಬ್ ರಹೀಮ್ ಖಾನ್ ಅವರ ಮಗನ ಮದುವೆ ಹೈದರಾಬಾದ್‌ನಲ್ಲಿ (Hyderabad) ಅದ್ಧೂರಿಯಾಗಿ ಜರುಗಿದ್ದು, ಈ ವಿವಾಹ ಮಹೋತ್ಸವದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಉಪಸ್ಥಿತರಿದ್ದರು. ಈ ವೇಳೆ ಅವರ ಮೇಲೆ ಹಣದ ಸುರಿಮಳೆಗೈಯಲಾಯಿತು. ಕಾಲಮೇಲೆಲ್ಲಾ ಝಣ, ಝಣ ಕಾಂಚಣ ಸುರಿಯಲಾಗಿದೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಮದುವೆ ಸಂಭ್ರಮದಲ್ಲಿ ಮೋಜು-ಮಸ್ತಿ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬರ, ಹನಿ ನೀರಿಗೂ ಪರದಾಡುವ ಮೂಲಕ ಜನ ಸಂಕಷ್ಟದಲ್ಲಿದ್ದರೆ ಸಚಿವರು ಮಾತ್ರ ಕಾಲ ಕೆಳಗೆ ರಾಶಿ ರಾಶಿ ಹಣ ಹಾಕಿ ಕೂತು ರಾಜರೋಷವಾಗಿ ಮೆರೆಯುತ್ತಿದ್ದಾರೆ.

ಸಚಿವರ ಕಾಲಡಿಯಲ್ಲಿ ರಾಶಿ ಹಣ ಬಿದ್ದಿದ್ದರೂ ಕುಂತಲ್ಲೇ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ಹೈದರಾಬಾದ್‍ನಲ್ಲೆ ನಡೆದ ಸ್ನೇಹಿತನ ಮಗನ ಮದುವೆ ಸಂಭ್ರಮದಲ್ಲಿ ಸಚಿವರ ಕಾರುಬಾರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಇದನ್ನು ಓದಿ: Property Rule: ಸ್ವಂತ ಆಸ್ತಿ, ಜಮೀನು ಹೊಂದಿದವರಿಗೆ ಮಹತ್ವದ ಸುದ್ದಿ- ಆಸ್ತಿ ಪತ್ರಗಳಿಗೆ ಬರಲಿದೆ ಹೊಸ ರೂಲ್ಸ್

You may also like

Leave a Comment