Home » Gruha Lakshmi Scheme: ಗೃಹಲಕ್ಷ್ಮೀ ಹಣ ಕೈ ಸೇರದ ಯಜಮಾನಿಯರೇ, ಕೂಡಲೇ ಅರ್ಜಿಯಲ್ಲಿ ಇದೊಂದನ್ನು ಸರಿಪಡಿಸಿಬಿಡಿ!

Gruha Lakshmi Scheme: ಗೃಹಲಕ್ಷ್ಮೀ ಹಣ ಕೈ ಸೇರದ ಯಜಮಾನಿಯರೇ, ಕೂಡಲೇ ಅರ್ಜಿಯಲ್ಲಿ ಇದೊಂದನ್ನು ಸರಿಪಡಿಸಿಬಿಡಿ!

1 comment
Gruha Lakshmi Scheme

Gruha Lakshmi Scheme: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಕರ್ನಾಟಕದಲ್ಲಿ ಸುಮಾರು 1.70 ಕೋಟಿ ಫಲಾನುಭವಿಗಳನ್ನು ಈ ಯೋಜನೆಯಡಿ ಅರ್ಹರು ಎಂದು ಪರಿಗಣಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಕಾರ, ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ. ಇದರಲ್ಲಿ ಅತಿ ಹೆಚ್ಚಿನ 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಹೀಗಾಗಿ, ಬಹುಪಾಲು ಮಹಿಳೆಯರು ನೊಂದಣಿ ಮಾಡಿಸಿಕೊಂಡಿದ್ದರೂ ಹಣ ಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ, ಇನ್ನೂ ಕೆಲ ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಖಾತೆಗೆ ಹಣ ಬಾರದೇ ಇರುವುದಕ್ಕೆ ತಾಂತ್ರಿಕ ಕಾರಣ ಸೇರಿದಂತೆ ಹಲವಾರು ಅಂಶಗಳನ್ನು ಬಹಿರಂಗಪಡಿಸಿದೆ. ಇದರ ಜೊತೆಗೆ ಹಣ ಜಮೆ ಆಗದ ಮಹಿಳೆಯರು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನೂ ಒದಗಿಸಿದೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿ ಮಾಡಿಸಿಕೊಂಡ ಸುಮಾರು 10 ಲಕ್ಷ ಗೃಹಿಣಿಯರಿಗೆ ಈವರೆಗೂ ಹಣ ತಲುಪಿಲ್ಲ ಎನ್ನಲಾಗಿದೆ. ಹೀಗೆ ಹಣ ತಲುಪದೇ ಇರುವವರ ಪಟ್ಟಿ ಮಾಡಿಕೊಂಡು ಆಯಾ ಸಮಸ್ಯೆಗೆ ಅನುಗುಣವಾಗಿ ಅದನ್ನು ಸರಿಪಡಿಸಲು ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಬರುವ ನೌಕರರನ್ನು ಬಳಕೆ ಮಾಡಿಕೊಂಡು ಗೊಂದಲ ಆಗಿರುವವರನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಹಣ ಜಮೆ ಆಗದೇ ಇರುವವರನ್ನು ಗುರುತಿಸಿ ಆಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಅವರ ಖಾತೆಗೆ ಹಣ ಮನೆ ಮಾಡಲಾಗುತ್ತದೆ.

* ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರೆ, ಯಾವ ಖಾತೆಯ ಸಂಖ್ಯೆ ಜೋಡಣೆಯಾಗಿದೆ ಎನ್ನುವುದನ್ನು ಗಮನಿಸಿ.
* ಬ್ಯಾಂಕ್‌ಗೆ ಹೋಗಿ ಒಮ್ಮೆ ನಿಮ್ಮ ಖಾತೆ ಚಾಲ್ತಿಯಲ್ಲಿ ಇದೆಯೇ/ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
* ಮೊದಲನೇ ಖಾತೆಯ ವಿವರವನ್ನು ಪರಿಶೀಲಿಸಿ.
* ಬ್ಯಾಂಕ್‌ನಲ್ಲಿ ವಿಚಾರಿಸಿದರೆ ನಿಮಗೆ ನಿಖರ ಮಾಹಿತಿ ತಿಳಿಯಲಿದೆ.

ಬಹುತೇಕರ ಆಧಾರ್‌ ಜೋಡಣೆ ಇಲ್ಲವೇ ಬ್ಯಾಂಕ್‌ ಖಾತೆಯ ಗೊಂದಲವಿದ್ದ ಸಂದರ್ಭ ಹಣ ಜಮೆ ಆಗುವುದರಲ್ಲಿ ಸಮಸ್ಯೆ ಎದುರಾಗಬಹುದು. ಈ ಹಿಂದೆ ನೊಂದಣಿ ಮಾಡಿಸಿಕೊಂಡಿದ್ದ ಗ್ರಾಮ ಒನ್‌ ಕೇಂದ್ರಗಳಿಗೆ ತೆರಳಿ ಸಮಸ್ಯೆಯನ್ನು ವಿವರಿಸಬೇಕು. ಅದಕ್ಕಾಗಿ ಆಧಾರ್‌ ಕಾರ್ಡ್‌ ನೀಡಿ ಜೋಡಣೆ ಆಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಒಂದು ವೇಳೆ, ಆಧಾರ್ ಜೋಡಣೆ ಆಗದೇ ಇದ್ದಲ್ಲಿ ಸರಿಪಡಿಸಿಕೊಳ್ಳಿ.

 

ಇದನ್ನು ಓದಿ:  ಈ ನೆಟ್ವರ್ಕ್ ಪರಿಚಯಿಸಿದೆ ಭಾರೀ ಅಗ್ಗದ ರೀಚಾರ್ಜ್ ಪ್ಲಾನ್ ! ಇಲ್ಲಿ ನಿಮಗೆ ಎಲ್ಲವೂ ಅನ್ಲಿಮಿಟೆಡ್

You may also like

Leave a Comment