DY Chandrachud: ನ್ಯಾಯಾಲಯದ ತೀರ್ಪನ್ನು ಶಾಸಕಾಂಗ ನೇರವಾಗಿ ತಳ್ಳಿಹಾಕಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (DY Chandrachud) ಅವರು ಪ್ರತಿಪಾದಿಸಿದ್ದಾರೆ. ನ್ಯಾಯಾಂಗದ ಆದೇಶದಲ್ಲಿನ ನ್ಯೂನತೆಯನ್ನು ಸರಿಪಡಿಸಲು ಶಾಸಕಾಂಗವು ಹೊಸ ಕಾನೂನನ್ನು ಜಾರಿಗೊಳಿಸುವ ಆಯ್ಕೆಯನ್ನು ಬಳಸಬಹುದು ಎಂದು ಹೇಳಿದ್ದಾರೆ.
ತಾವು ನೀಡಿದ ತೀರ್ಪಿನ ಬಗ್ಗೆ ಸಮಾಜ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನ್ಯಾಯಮೂರ್ತಿಗಳು ಚಿಂತೆ ಮಾಡುವುದಿಲ್ಲ. ಇದೊಂದು ಚುನಾಯಿತ ಸರಕಾರ ಹಾಗೂ ನ್ಯಾಯಾಂಗದ ನಡುವೆ ಇರುವ ವ್ಯತ್ಯಾಸ ಎಂದು ಅವರು ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ಶಾಸಕಾಂಗವು ನ್ಯಾಯಾಲಯದ ತೀರ್ಪಿನ ವಿಚಾರ ಬಂದಾಗ ಏನು ಮಾಡಬೇಕು? ಏನು ಮಾಡಬಾರದು ಎಂಬುವುದರ ನಡುವೆ ವಿಭಜನಾ ರೇಖೆಯಿದೆ. ತೀರ್ಪು ರದ್ದಾಗಿದೆ ಎಂದು ಅದನ್ನು ನೇರವಾಗಿ ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ, ನ್ಯಾಯಮೂರ್ತಿಗಳು ಯಾವುದೇ ಪ್ರಕರಣದ ಕುರಿತು ನಿರ್ಣಯ ತೆಗೆದುಕೊಳ್ಳುವಾದ ನೀತಿ ನಿಯಮಗಳನ್ನು ಮಾತ್ರ ಅನುಸರಿಸುತ್ತಾರೆ. ಸಾರ್ವಜನಿಕ ನೀತಿ ನಿಯಮಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ಸುಪ್ರೀಂಕೋರ್ಟ್ ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳಲು ಉದ್ದೇಶಿಸಿರುವ ಜನರ ನ್ಯಾಯಾಲಯ, ನ್ಯಾಯಾಧೀಶರು ಚುನಾಯಿತರಾಗಿರುವುದು ನಮ್ಮ ಶಕ್ತಿಯೇ ಹೊರತು ಕೊರತೆಯಲ್ಲ ಎಂದು ಚಂದ್ರಚೂಡ್ ಅವರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಭಾರತದ ಸುಪ್ರೀಂಕೋರ್ಟ್ ಯುನೈಟ್ ಸ್ಟೇಟ್ಸ್‌ನ ಸುಪ್ರೀಂಕೋರ್ಟ್‌ಗಿಂತ ಭಿನ್ನವಾಗಿದೆ ಎಂಬ ಮಾತನ್ನು ಕೂಡಾ ಹೇಳಿದ್ದಾರೆ.
ನಾವು ವರ್ಷಕ್ಕೆ ಕನಿಷ್ಠ 72,000 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇವೆ, ಅಮೇರಿಕನ್ ಸುಪ್ರೀಂಕೋರ್ಟ್ ಒಂದು ವರ್ಷದಲ್ಲಿ ನಿಗದಿತ ಪ್ರಕರಣಗಳನ್ನು ವಿಲೇವಾರಿ ಮಾಡುತ್ತದೆ. ಇನ್ನೂ ನಮಗೆ ಎರಡು ತಿಂಗಳುಗಳಿವೆ, ಇದು ನಾವು ಮಾಡುವ ಕೆಲಸದಲ್ಲಿ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಕೂಡಾ ಹೇಳಿದ್ದಾರೆ.
ಇದನ್ನು ಓದಿ: ಡಿಕೆ ಶಿವಕುಮಾರ್ ಸಿಎಂ ಆಗಲು ನಮ್ಮ ಬೆಂಬಲ- ಹೆಚ್ ಡಿ ಕುಮಾರಸ್ವಾಮಿ ಅವರಿಂದ ಶಾಕಿಂಗ್ ಹೇಳಿಕೆ!!!
