Home » IT raid: ಚಾಮರಾಜನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂ ಐಟಿ ಅಧಿಕಾರಿಗಳು ದಾಳಿ

IT raid: ಚಾಮರಾಜನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂ ಐಟಿ ಅಧಿಕಾರಿಗಳು ದಾಳಿ

0 comments
IT raid

IT raid on Vrushabendrappa : ಚಾಮರಾಜನಗರ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ (IT raid on Vrushabendrappa) . ಮೂರು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು, ಆಸ್ತಿ ವಿವರದ ಮಾಹಿತಿ ತೆಗೆದುಕೊಂಡು ಕಚೇರಿಗೆ ಬರುವಂತೆ ವೃಷಬೇಂದ್ರಪ್ಪ (Vrushabendrappa) ಅವರಿಗೆ ಸೂಚನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಹೆಚ್ಚು ಜನರು ಶೋ ರೂಂ ಗೆ ಭೇಟಿ ನೀಡಿದ್ದರು ಎಂದು ದೂರು ನೀಡಲಾಗಿದ್ದು, ಸದ್ಯ ಈ ಕಾರಣದಿಂದಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಉದ್ಯಮಿಯಾಗಿರುವ ವೃಷಬೇಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದಾರೆ. ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಸದ್ಯ ಇವರಿಗೆ ಎಲ್ಲಾ ಆಸ್ತಿ ವಿವರದ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಶೋ ರೂಂ ಪರಿಶೀಲನೆ ಮಾಡಿ ಇದೀಗ ಅಧಿಕಾರಿಗಳು‌ ತೆರೆಳಿದ್ದಾರೆ.

ಇತ್ತ, ಐಟಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್ ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈಗ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ 50 ಕಡೆ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

You may also like

Leave a Comment