Home » Jagadish Shettar: ಸೋತರೂ ಜಗದೀಶ್ ಶೆಟ್ಟರ್ ಗೆ ಒಲಿಯಲಿದೆ ಮಂತ್ರಿಗಿರಿ? ‘ಕೈ’ ಪಡೆಯ ಲೆಕ್ಕಾಚಾರ ಏನು?

Jagadish Shettar: ಸೋತರೂ ಜಗದೀಶ್ ಶೆಟ್ಟರ್ ಗೆ ಒಲಿಯಲಿದೆ ಮಂತ್ರಿಗಿರಿ? ‘ಕೈ’ ಪಡೆಯ ಲೆಕ್ಕಾಚಾರ ಏನು?

by ಹೊಸಕನ್ನಡ
0 comments
Jagadish Shettar

Jagadish Shettar: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Election) ಯಾರೂ ಊಹಿಸದಂತ ಫಲಿತಾಂಶವನ್ನು ಕರ್ನಾಟಕದ ಮತದಾರ ಪ್ರಭುಗಳು ನೀಡಿದ್ದಾರೆ. ಆನೇಕ ಘಟಾನುಘಟಿ ನಾಯಕರೇ ಸೋತು ಮುಗ್ಗರಿಸಿದ್ದಾರೆ. ಅಂತೆಯೇ ಸದ್ಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಹೀನಾಯವಾಗಿ ಸೋಲುಂಡಿದ್ದಾರೆ. ಆದರೆ ಜಗದೀಶ್ ಶೆಟ್ಟರ್(Jagadish shettar) ಸೋತರೂ ಕೂಡ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಗಿರಿ ಸಿಗೊ ಸಾಧ್ಯತೆ ದಟ್ಟವಾಗಿದೆ.

ಹೌದು, ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ(BJP) ಸೀಟ್ ಕೊಡದೆ ತನಗೆ ತಾನೇ ನಷ್ಟ ಮಾಡಿಕೊಂಡದ್ದು ಒಂದೆಡೆಯಾದರೆ, ಮತ್ತೊಂದೆಡೆ ಇದು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಸೋತರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಲಾಭ ಮಾಡಿಕೊಟ್ಟರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಸೋತರೂ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕು. ಸೋತರೆಂದು ಸ್ಥಾನ ನೀಡದಿದ್ದರೆ ಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಸಂಭವ ಸಾಧ್ಯತೆ ಇದೆ.

ಹೀಗಾಗಿ ಸದ್ಯ ಕಾಂಗ್ರೆಸ್(Congress) ಸರ್ಕಾರದಲ್ಲಿ ಶೆಟ್ಟರ್ ಅವರಿಗೆ ಎಂಎಲ್‌ಸಿ(MLC) ಮಾಡಿ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್‌ ವರಿಷ್ಠರ ಒಲವು ತೋರಿದ್ದು, ಈ ಬಗ್ಗೆ ‘ಕೈ’ ಪಡೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ಸಿಗೆ ಬಲ ಬರಲಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ಸಿಗರದು.

ಅಂದಹಾಗೆ 30 ವರ್ಷಗಳಿಂದ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಶೆಟ್ಟರ್‌ ಬಿಜೆಪಿ ಕಟ್ಟಿದವರಲ್ಲಿ ಒಬ್ಬರು. ಕೊನೇ ಘಳಿಗೆಯಲ್ಲಿ ಪಕ್ಷ ಗೌರವದಿಂದ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ಗೆ ಜಿಗಿದಿದ್ದರು. ಆದರೆ, ಸೆಂಟ್ರಲ್‌ ಕ್ಷೇತ್ರದಲ್ಲಿ ಸೋತರೂ ಅವರು ಕಾಂಗ್ರೆಸ್‌ ಸೇರಿದ್ದರ ಲಾಭ ಪಕ್ಷಕ್ಕಾಗಿದೆ. ಸುತ್ತಮುತ್ತಲಿನ ನಾಲ್ಕಾರು ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಬರಲು ಇವರ ಆಗಮನವೂ ಕಾರಣವಾಗಿದೆ. ಕಾಂಗ್ರೆಸ್ಸಿನೊಂದಿಗೆ ಇರದ ಲಿಂಗಾಯತ ಸಮುದಾಯ ಈ ಸಲ ಪಕ್ಷಕ್ಕೆ ಬೆಂಬಲ ನೀಡಿದೆ ಎಂದರೆ ಅದಕ್ಕೆ ಶೆಟ್ಟರ್‌ ಕೂಡ ಕಾರಣ ಎನ್ನುವುದನ್ನು ಕಾಂಗ್ರೆಸ್‌ ಮನಗಂಡಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಮುಕ್ತಾಯ, ಬಿಬಿಎಂಪಿ ಎಲೆಕ್ಷನ್‌ಗೆ ಕಾಂಗ್ರೆಸ್‌ ಚಿತ್ತ! ಯಾವಾಗ?

You may also like

Leave a Comment