Home » Election News: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಗಣಿ ಧಣಿ! ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಇಲ್ಲಿದೆ ನೋಡಿ!

Election News: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಗಣಿ ಧಣಿ! ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಇಲ್ಲಿದೆ ನೋಡಿ!

by ಹೊಸಕನ್ನಡ
0 comments

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ಪಕ್ಷಗಳು ಭರದಿಂದ ಪ್ರಚಾರ ನಡೆಸುತ್ತಿವೆ. ಆದರೆ ಚುನಾವಣೆ ಸನ್ಹಿತವಾದರೂ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಈ ನಡುವೆ ಉತ್ತರ ಕರ್ನಾಟಕದ ಭಾಗದಲ್ಲಿ ಈಗಷ್ಟೇ ಚಿಗುರೊಡೆಯುತ್ತಿರುವ ಗಣಿಧಣಿಯ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವು ಇದೀಗ ತಮ್ಮ ಪಕ್ಷದಿಂದ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಅವರ ಹೆಸರುಗಳನ್ನು ಘೋಷಣೆ ಮಾಡಿದೆ.

ಹೌದು, ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಿನ್ನೆ ಜನಾರ್ದನ ರೆಡ್ಡಿ ಐದು ಕ್ಷೇತ್ರಗಳಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ .ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಿರುಗುಪ್ಪ, ಕನಕಗಿರಿ, ನಾಗಠಾಣ, ಸಿಂಧನೂರು ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದು, ಇದೀಗ ಆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.

ಆ ಅಭ್ಯರ್ಥಿಗಳ ಪಟ್ಟಿಯನ್ನು ನೋಡೋದಾದ್ರೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ-ಧರೆಪ್ಪ ನಾಯಕ, ಕೊಪ್ಪಳ ಜಿಲ್ಲೆಯ ಎಸ್​ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿಗೆ-ಡಾ.ಚಾರುಲ್ ದಾಸರಿ, ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರಕ್ಕೆ-ಶ್ರೀಕಾಂತ್, ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರ-ನೆಕ್ಕಂಟಿ ಮಲ್ಲಿಕಾರ್ಜುನ, ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರ-ಮಹೇಶ್ ಕಣಕ್ಕಿಳಿಯಲಿದ್ದಾರೆ.

ಅಭ್ಯರ್ಥಿಗಳನ್ನ ಘೋಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಅವರು ಗೆಲ್ಲುತ್ತಾರೆ ಎನ್ನೋ ನಂಬಿಕೆಯಿಂದ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಸರ್ವೇ ಮಾಡಿಸಿ ಗೆಲ್ಲುವ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತಿದ್ದೆವೆ. ನಾನು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರು. ಶ್ರೀರಾಮುಲು ವಿರುದ್ದ ಅಭ್ಯರ್ಥಿ ಹಾಕುತ್ತೀರಾ ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ಸಮಯವಿದೆ ಎಲ್ಲದಕ್ಕೆ ಉತ್ತರ ಸಿಗುತ್ತೆ‌‌. ಆವತ್ತು ನಿಮಗೆ ಸಮಾಧಾನ ಆಗಬಹುದು. ರಾಜ್ಯದಲ್ಲಿ ಅಭಿವೃದ್ಧಿ ಪರ ಚರ್ಚೆಗೆ ಜನ ಮನ್ನಣೆ ಕೊಡುತ್ತಾರೆ ಎಂದರು.

ಸಿದ್ದು ವಿರುದ್ದದ ಸಚಿವ ಅಶ್ವಥ್ ನಾರಯಣ್ ಹೊಡೆದು ಹಾಕಿ ಎನ್ನುವ ಪದ ಬಳಕೆ ಬಗ್ಗೆ ಮಾತನಾಡಿದ ರಡ್ಡಿ, ಯಾರೇ ಏನೇ ಮಾತಾಡಿದ್ರು ಜನ ತೀರ್ಮಾನ ಮಾಡ್ತಾರೆ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ನನ್ನ ಪಕ್ಷ ಹಾಗೂ ಕೆಲಸದ ಬಗ್ಗೆ ಮಾತನಾಡುತ್ತೇನೆ. ಹಿಂದೂ-ಮುಸ್ಲಿಂ ಯಾವ ಭೇದ ಭಾವ ಇರಬಾರದು. ಅದೇ ತರಹ ನಾನು ಹೋಗುತ್ತಿದ್ದೇನೆ ಎಂದು ಹೇಳಿದರು.

ಈಗಾಗಲೇ ಗಣಿ ಧಣಿ ಜನಾರ್ದನ ರೆಡ್ಡಿ ಯಾವು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ರಾಜಕೀಯ ಕಾರ್ಯತಂತ್ರಗಳನ್ನು ನಡೆಸಿದ್ದಾರೆ. ಅಲ್ಲದೇ ಪಕ್ಷದಿಂದ ಪಾದಯಾತ್ರೆ ಮಾಡುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ಪಕ್ಷದ ಪ್ರಾಣಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ರೈತರಿಗೆ ಆದ್ಯತೆ ನೀಡಿದ್ದಾರೆ. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂ ಜಿಲ್ಲೆಗಳ ಮೇಲೆ ಹೆಚ್ಚಾಗಿ ಕಣ್ಣಿಟ್ಟಿರುವ ರೆಡ್ಡಿ, ಮೊನ್ನೇ ಅಷ್ಟೇ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಎಂಟ್ರಿಕೊಟ್ಟಿದ್ದರು. ಕ್ಷೇತ್ರದಲ್ಲಿ ಪತ್ನಿ ಅರುಣಾಲಕ್ಷ್ಮೀ ಜತೆ ಪಾದಯಾತ್ರೆ ನಡೆಸಿದ್ದರು.

You may also like

Leave a Comment