Home » Women Pension Rules : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬೊಂಬಾಟ್ ಸುದ್ದಿ; 50 ವರ್ಷದಿಂದ ಮನೆಯಲ್ಲೇ ಕುಳಿತು ಪಡೆಯಿರಿ ಪಿಂಚಣಿ!!

Women Pension Rules : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬೊಂಬಾಟ್ ಸುದ್ದಿ; 50 ವರ್ಷದಿಂದ ಮನೆಯಲ್ಲೇ ಕುಳಿತು ಪಡೆಯಿರಿ ಪಿಂಚಣಿ!!

1 comment
Women Pension Rules

Women pension Rules : ಜಾರ್ಖಂಡ್ನ ಹೇಮಂತ್ ಸೊರೆನ್ ಸರ್ಕಾರವು ಮಹಿಳೆಯರಿಗೆ (Women Good News)ದೊಡ್ಡ ಘೋಷಣೆ ಮಾಡಿದೆ. ಈ ಹಿಂದೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಜ್ಯದ ಆದಿವಾಸಿಗಳು ಮತ್ತು ದಲಿತರು 60 ವರ್ಷ ವಯಸ್ಸಿನ ಬದಲಿಗೆ 50 ವರ್ಷ ವಯಸ್ಸಿನ ಪಿಂಚಣಿ ಪ್ರಯೋಜನಗಳಿಗೆ(Pension Rules)ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದ್ದಾರೆ.

ಮಹಿಳೆಯರ ಪಿಂಚಣಿ ಅರ್ಹತೆಯ (Women Pension Rules)ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ಜಾರ್ಖಂಡ್ ಸರ್ಕಾರ ತೀರ್ಮಾನ ಕೈಗೊಂಡಿದೆ. ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕೃಪಾ ನಂದ್ ಝಾ ಈ ಕುರಿತು ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ನೀಡುವ ಪಿಂಚಣಿ ಅರ್ಹತಾ ವಯಸ್ಸನ್ನು 50 ವರ್ಷಕ್ಕೆ ಇಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Budget: ರಾಜ್ಯ ಬಜೆಟ್‌; ಈ ದಿನದಂದು ಬಜೆಟ್‌ ಮಂಡನೆ!!!

ಸರ್ಕಾರದ ಈ ತೀರ್ಮಾನ ಜಾರಿಗೆ ಬಂದಲ್ಲಿ ಜಾರ್ಖಂಡ್ನಲ್ಲಿ ಹೆಚ್ಚುವರಿ 18 ಲಕ್ಷ ಫಲಾನುಭವಿಗಳು ಪಿಂಚಣಿ ಯೋಜನೆಗೆ ಸೇರಲಿದ್ದಾರೆ. ರಾಜ್ಯದಲ್ಲಿ ಒಟ್ಟು 35.68 ಲಕ್ಷ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಜಾರ್ಖಂಡ್ನಲ್ಲಿ 38,432 ಅಂಗನವಾಡಿ ಕೇಂದ್ರಗಳಿವೆ. ಮೂರು ವರ್ಷಗಳಲ್ಲಿ ಉಳಿದ ಕೇಂದ್ರಗಳಿಗೆ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ ಎಂದು ಝಾ ಹೇಳಿದ್ದಾರೆ. ಇದಲ್ಲದೇ ಟ್ರಾನ್ಸ್ಜೆಂಡರ್ ಸಮುದಾಯಕ್ಕೂ ಹೊಸ ಯೋಜನೆಗಳೂ ಜಾರಿಯಲ್ಲಿವೆ.

You may also like

Leave a Comment