Home » Kadaba: ಕುಟ್ರುಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ!! ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳ ಸಾಧಕರಿಗೆ ಸನ್ಮಾನ

Kadaba: ಕುಟ್ರುಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ!! ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳ ಸಾಧಕರಿಗೆ ಸನ್ಮಾನ

166 comments
Kadaba

ಕಡಬ:ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಪಂಚಾಯತ್ ಅಧ್ಯಕ್ಷೆ ಸುಮನ ಹೊಸ್ಮಠ ಅಧ್ಯಕ್ಷತೆಯಲ್ಲಿ ಡಿಸೆಂಬರ್ 12 ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಧಾರ್ಮಿಕ ಮುಖಂಡ ಶಿವಪ್ರಸಾದ್ ರೈ ಮೇಲೇರಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಮಂಡೆಕೋಲು,ಪಂಚಾಯತ್ ಪಿಡಿಓ ಆನಂದ ಎ., ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

 

ವಿವಿಧ ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.ಕೃಷಿ ಕ್ಷೇತ್ರದಲ್ಲಿ ಧನಂಜಯ ಕೊಡಂಗೆ, ತೀರ್ತೇಶ್ ಅಮೈ, ದೈವಾರಾಧನ ಕ್ಷೇತ್ರದ ಕುಟ್ಟಿ ಅಜಲ ನಾಡೋಳಿ (ಕಡ್ಯ), ಕ್ರೀಡಾ ಕ್ಷೇತ್ರದ ಅಫ್ರಿದ್ ಹೊಸ್ಮಠ,ಆಕಾಶ್ ಮಾದೇರಿಕೆ, ಭೂಷಿತ ಉಳಿಪ್ಪು, ಸಾಮಾಜಿಕ ಕ್ಷೇತ್ರದ ಗಂಗಾಧರ ಗೌಡ ಹೊಸ್ಮಠ, ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕ ಶೀನಾ ನಾಡೋಳಿ,ಅಂಗನವಾಡಿ ಕಾರ್ಯಕರ್ತೆ ಅಮ್ಮಣಿ, ಹೈನುಗಾರಿಕೆ ಕ್ಷೇತ್ರದ ಜಯಚಂದ್ರ ರೈ ಕುಂಟೋಡಿ, ಆಶಾ ಕಾರ್ಯಕರ್ತೆ ಲೋಲಾಕ್ಷಿ ಕುಟ್ರುಪಾಡಿ, ಆರೋಗ್ಯ ಇಲಾಖೆಯ ಆನ್ಸಿ ಇವರುಗಳನ್ನು ಅತಿಥಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನು ಓದಿ: Abhishek Bacchan – Aishwaya: ವಿಚ್ಛೇದನ ವಿವಾದದ ಬೆನ್ನಲ್ಲೇ ಐಶ್ವರ್ಯ ರೈ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಪತಿ ಅಭಿಷೇಕ್ ಬಚ್ಚನ್ !!

ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಹಾಗೂ ಗ್ರಂಥಾಲಯದಿಂದ ಅತೀ ಹೆಚ್ಚು ಬಾರಿ ಪುಸ್ತಕ ಪಡೆದ ಓದುಗರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಬಳಿಕ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಕನಿಷ್ಕ್ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ವಿಚಾರಗಳ ಸಮಾಲೋಚನೆ ನಡೆಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರು, ಕಡಬ ತಾಲೂಕಿನ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರು, ಪಂಚಾಯತ್ ಕಾರ್ಯದರ್ಶಿ ಗೋಪಿನಾಥ್ ಡಿ., ಉಪಾಧ್ಯಕ್ಷೆ ಯಶೋಧ ಕೆ.ಆರ್ ಹಾಗೂ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಗ್ರಂಥಾಲಯ ವರದಿಯನ್ನು ಮೇಲ್ವಿಚಾರಕಿ ಚಂದ್ರಾವತಿ ವಾಚಿಸಿ, ವಿಜೇತರ ಪಟ್ಟಿಯನ್ನು ಸಿಬ್ಬಂದಿ ಜಿತೇಶ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ. ಪ್ರಸ್ತಾವಿಕ ಭಾಷಣಗೈದರು.

You may also like

Leave a Comment